ನವರಾತ್ರಿಯಲ್ಲಿ PFI ಸಹಿತ 9 ರಾಕ್ಷಸರನ್ನು ಮುಗಿಸಿತು- SDPI ಗೆ ನಿಷೇಧ ಹೇರಿ ‘ದಸರಾ’ ಆಚರಿಸಬೇಕು- ಹಿಂದೂ ಜನಜಾಗೃತಿ ಸಮಿತಿ
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಅಂದರೆ ‘ಪಿ.ಎಫ್.ಐ.’ ಅನ್ನು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ (UAPA) ಅಡಿಯಲ್ಲಿ ನಿಷೇಧಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ.
‘ಪಿ.ಎಫ್.ಐ.’ಯು ಹಲವು ದೇಶವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹಾಗೂ ಹಿಂದೂ ನಾಯಕರ ಹತ್ಯೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಕಳೆದ ಕೆಲವು ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಆಂದೋಲನಗಳು, ಮನವಿಗಳು, ಸೋಶಿಯಲ್ ಮೀಡಿಯಾ ಕ್ಯಾಂಪೆನ್ಗಳು ಇತ್ಯಾದಿಗಳ ಮೂಲಕ ‘ಪಿ.ಎಫ್.ಐ.’ ವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತಿತ್ತು. ದೇಶದಲ್ಲಿ ನವರಾತ್ರಿ ನಡೆಯುತ್ತಿದೆ, ಈ ನಡುವೆಯೇ ‘ಪಿ.ಎಫ್.ಐ.’ ಸೇರಿದಂತೆ ಒಂಭತ್ತು ರಾಕ್ಷಸಿ ಜಿಹಾದಿ ಸಂಘಟನೆಗಳನ್ನು ಮುಗಿಸಲಾಗಿದೆ. ಇನ್ನು ‘ಪಿ.ಎಫ್.ಐ.’ನ ರಾಜಕೀಯ ಸಂಘಟನೆಯಾಗಿರುವ ‘ಎಸ್.ಡಿ.ಪಿ.ಐ.’ವನ್ನು ನಿಷೇಧಿಸಿ ‘ದಸರಾ’ ಆಚರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಕೇಂದ್ರ ಸರಕಾರವು ಕೆಲವು ವರ್ಷಗಳ ಹಿಂದೆ ಡಾ. ಜಾಕಿರ್ ನಾಯಿಕ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ನಿಷೇಧಿಸುತ್ತಾ ಅವನನ್ನು ಪರಾರಿ ಭಯೋತ್ಪಾದಕ ಎಂದು ಘೋಷಿಸಿತ್ತು; ಆದರೆ ಈ ಭಯೋತ್ಪಾದಕನ 50 ಕ್ಕೂ ಹೆಚ್ಚು ಟ್ವಿಟರ್ ಮತ್ತು ಫೇಸ್ಬುಕ್ನ ಖಾತೆಗಳು ಸಕ್ರಿಯವಾಗಿವೆ. ಅದೇ ರೀತಿ ‘ಪಿ.ಎಫ್.ಐ.’ ಮತ್ತು ಅಂಗ ಸಂಸ್ಥೆಗಳನ್ನು ನಿಷೇಧಿಸಿದ್ದರೂ ಅವರ ಟ್ವಿಟರ್ ಮತ್ತು ಫೇಸ್ಬುಕ್ ಖಾತೆಗಳು ಇನ್ನೂ ಸಕ್ರಿಯವಾಗಿವೆ.
ಈ ನಿಷೇಧದಿಂದ ಖಂಡಿತವಾಗಿಯೂ ಭಯೋತ್ಪಾದನಾ ಚಟುವಟಿಕೆಗಳು ನಿಲ್ಲುವವು; ಆದರೆ ಭಯೋತ್ಪಾದನಾ ಸಿದ್ಧಾಂತವನ್ನು ಹರಡುವ ಕಾರ್ಯವು ಮುಂದುವರಿಯುವುದು. ಒಂದು ವೇಳೆ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ಭಯೋತ್ಪಾದನೆಯ ಪ್ರಸಾರ ಮುಂದುವರೆದರೆ, ಅದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾರಣವಾಗುವುದು ಮತ್ತು ಪ್ರತ್ಯಕ್ಷ ಹೇರಿದ ಈ ನಿಷೇಧಕ್ಕೆ ಯಾವುದೇ ಅರ್ಥವಿರುವುದಿಲ್ಲ. ಆದ್ದರಿಂದ ‘ಪಿ.ಎಫ್.ಐ.’ ಮತ್ತು ಅದರ ಎಲ್ಲ ಅಂಗಸಂಸ್ಥೆಯ ಸಂಘಟನೆಗಳ ಟ್ವಿಟರ್ ಮತ್ತು ಫೇಸ್ಬುಕ್ ಸಹಿತ ಇತರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ತಕ್ಷಣವೇ ಮುಚ್ಚಬೇಕು ಎಂದು ನಾವು ಬಲವಾಗಿ ಆಗ್ರಹಿಸುತ್ತೇವೆ.
ಪುಣೆಯಲ್ಲಿ ಇತ್ತೀಚೆಗೆ ‘ಪಿ.ಎಫ್.ಐ.’ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಗಳನ್ನು ನೀಡಲಾಗಿತ್ತು. ಅಂತಹ ಕೃತ್ಯಗಳು ಸಹ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಬಹುದು. ಇಂತಹ ಘೋಷಣೆ ಕೂಗುವವರ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಮಿತಿಯು ಒತ್ತಾಯಿಸಿದೆ.