ಬೈಂದೂರು: ವಿದ್ಯುತ್ ಮಾರ್ಗದಲ್ಲಿ ಸಾರ್ವಜನಿಕರು ಎಚ್ಚರವಹಿಸುವ ಬಗ್ಗೆ
ಉಡುಪಿ, ಸೆ.27: ಕುಂದಾಪುರ ವಿಭಾಗದ ಬೈಂದೂರು ಉಪವಿಭಾಗದ ಗೋಳಿಹೊಳೆ ಗ್ರಾಮದ ಹಾಲ್ಕಲ್ ಎಂಬಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಲ್ಲೂರು ವಿದ್ಯುತ್ ಉಪಕೇಂದ್ರಕ್ಕೆ, ವಿದ್ಯುತ್ ಪೂರೈಕೆ ಸಲುವಾಗಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ನಿರ್ಮಾಣಗೊಂಡಿರುವ 20.84 ಕಿ.ಮೀ ಉದ್ದದ 33 ಕೆವಿ ವಿದ್ಯುತ್ ಮಾರ್ಗವು ಸೆಪ್ಟಂಬರ್ 29 ರ ನಂತರ ಯಾವುದೇ ದಿನದಲ್ಲಿ ಚೇತನಗೊಳ್ಳಲಿರುವುದು.
ಆದುದರಿಂದ ಕೊಲ್ಲೂರು ಹೊಸ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗವು ಹಾದುಹೋಗುವ ಹೇರೂರು, ನಾವುಂದ, ಉಳ್ಳೂರು-11, ಉಪ್ರಳ್ಳಿ, ಕಂಬದಕೋಣೆ, ಶೇಡಿಗುಡ್ಡೆ, ಹೇರಂಜಾಲು, ಕಾಲ್ತೋಡು, ಬಲಗೋಣ,ಅರೆಶಿರೂರು, ಎಲ್ಲೂರು, ಹಾಲ್ಕಲ್, ಗೋಳಿಹೊಳೆ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಸ್ಥಳೀಯರು ಸಂಬಂಧಪಟ್ಟ ಮೆಸ್ಕಾಂ ಕಛೇರಿಯ ಗಮನಕ್ಕೆ ತರದೇ ಮಾರ್ಗದ ಹಾದಿಯಲ್ಲಿ ಯಾವುದೇ ಮಣ್ಣು ಅಗೆತ, ಬೆಂಕಿ ಹಚ್ಚುವಿಕೆ, ಕಂಬ ಹತ್ತುವುದು, ಕಂಬಗಳನ್ನು ಬಳಸಿ ಇತರ ಚಟುವಟಿಕೆಗಳನ್ನು ನಡೆಸುವುದು ಇತ್ಯಾದಿ ನಿರ್ಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಬಾರದಾಗಿ ಈ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಸೂಚನೆ/ನಿರ್ದೇಶನಗಳನ್ನು ಕಡೆಗಣಿಸಿ, ಈ ಪ್ರದೇಶಗಳಲ್ಲಿ ಯಾವುದೇ ನಿರ್ಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆಗಬಹುದಾದ ಕಷ್ಟ-ನಷ್ಟಗಳಿಗೆ ಸಂಬಂಧಿಸಿದವರೇ ಜವಾಬ್ದಾರರಾಗಿರುತ್ತಾರೆ ಮತ್ತು ಇದರಿಂದ ಆಗಬಹುದಾದ ವಿದ್ಯುತ್/ಇತರೇ ಅವಘಡಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯು ಜವಾಬ್ದಾರಿಯಾಗಿರುವುದಿಲ್ಲ ಅದ್ದರಿಂದ ಸಾರ್ವಜನಿಕರು ಗಮನಿಸಿ, ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.