ಉಡುಪಿ: ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್: ಫಾರ್ಮಸಿಸ್ಟ್ ಡೇ
ಉಡುಪಿ ಸೆ.27(ಉಡುಪಿ ಟೈಮ್ಸ್ ವರದಿ): ಗಿರಿಜಾ ಗ್ರೂಪ್ ಆಫ್ ಕನ್ಸನ್ರ್ಸ್ ವತಿಯಿಂದ ಸೀನಿಯರ್ ಜೇಸಿ ಟೆಂಪಲ್ ಸಿಟಿ ಲೀಜನ್ ನ ಸಹಕಾರದೊಂದಿಗೆ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನಲ್ಲಿ ನಿನ್ನೆ ಫಾರ್ಮಸಿಸ್ಟ್ ಡೇ ಆಚರಿಸಲಾಯಿತು.
ಈ ವೇಳೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸಹಾಯಕ ಡ್ರಗ್ ನಿಯಂತ್ರಕ ಶಂಕರ್ ನಾಯ್ಕ್ ಅವರು ಮಾತನಾಡಿ, ಫಾರ್ಮಸಿಸ್ಟ್ ಗಳ ಪ್ರಮುಖ್ಯತೆ ಅವರ ಜವಾಬ್ದಾರಿ, ಅವರ ಅವಿರತ ಸೇವೆಯ ಬಗ್ಗೆ ಮಾತನಾಡಿದರು. ಹಾಗೂ ಗಿರಿಜಾ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯ ಬಗ್ಗೆ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು ಅವರ ಮೆಡಿಕಲ್ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಉಡುಪಿ ಜಿಲ್ಲಾ ಸಹಾಯಕ ಡ್ರಗ್ ನಿಯಂತ್ರಕ ಶಂಕರ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಗೊಂಡ ಹಿರಿಯ ಫಾರ್ಮಸಿಸ್ಟ್ ಗಳು ಮಾತನಾಡಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರ ಸಭೆಯ ಸದಸ್ಯರಾದ ಮಾನಸ ಪೈ, ಸಂಸ್ಥೆಯ ಪಾಲುದಾರರದ ರವೀಂದ್ರ ಕೆ ಶೆಟ್ಟಿ, ಹರೀಶ್ ಕುಮಾರ್, ಸುರೇಖಾ ರವೀಂದ್ರ ಶೆಟ್ಟಿ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್ ಮತ್ತು ಇತರ ಸದಸ್ಯಯರು ಉಪಸ್ಥಿತರಿದ್ದರು.