ಇಂದು 70 ವರ್ಷದ ಬಳಿಕ ಭೂಮಿ ಸಮೀಪಕ್ಕೆ ಬರಲಿದೆ ಗುರು

ಉಡುಪಿ: ಇಂದು ಸೆಪ್ಟಂಬರ್ 26ರಂದು ಗುರು ಗ್ರಹ ವಾರ್ಷಿಕ ಸಮೀಪ ಬರಲಿದೆ. ಇದನ್ನು ಜೂಪಿಟರ್ ಒಪೊಸಿಷನ್ ಎನ್ನುವರು. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಈ ವರ್ಷ 70 ವರ್ಷಗಳಿಗಿಂತ ಕಡಿಮೆ ದೂರ.

ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ನಮ್ಮ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ. ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿಪೂರ್ತಿ ಕಾಣಿಸುತ್ತದೆ . ಈ ವರ್ಷ ಈಗ 59.1 ಕೋಟಿ ಕಿಮೀ ದೂರದಲ್ಲಿ ಬರಲಿದೆ . ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಬರಲಿದೆ. ಹಾಗಾಗಿ ಬರೆ ಕಣ್ಣ್ಗೆ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತಿದೆ. ದೂರದರ್ಶಕದಲ್ಲಿ ಈ ಗ್ರಹ ಈಗ ನೋಡಲು ಅಂದವೋಅಂದ.
ಡಾ ಎ ಪಿ ಭಟ್ ಉಡುಪಿ.

Leave a Reply

Your email address will not be published. Required fields are marked *

error: Content is protected !!