ಅಂಬುಜಾ-ಎಸಿಸಿ ಷೇರ್’ಗಳನ್ನು ಸ್ವಾಧೀನ ಪಡಿಸಿಕೊಂಡ ಎರಡೇ ದಿನಗಳಲ್ಲಿ ಅಡಮಾನ ಇಟ್ಟ ಅದಾನಿ ಗ್ರೂಪ್
ನವದೆಹಲಿ: ಅಂಬುಜಾ ಸಿಮೆಂಟ್ಸ್ ಹಾಗೂ ಎಸಿಸಿ ಲಿ.ನ್ನು ಸ್ವಾಧೀನಪಡಿಸಿಕೊಂಡ ಎರಡೇ ದಿನಗಳಲ್ಲಿ ಬಿಲಿಯನೇರ್ ಗೌತಮ್ ಅದಾನಿ ಈ ಕಂಪನಿಗಳ ಬರೋಬ್ಬರಿ 1.04 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ಅಡ ಇಟ್ಟಿದ್ದಾರೆ.
ಎರಡು ಕಂಪನಿಗಳಲ್ಲಿನ ಷೇರುಗಳನ್ನು ಕೆಲವು ಸಾಲದಾತರು ಮತ್ತು ಇತರ ಹಣಕಾಸು ಪಕ್ಷಗಳ ಲಾಭಕ್ಕಾಗಿ, ಪಡೆದುಕೊಳ್ಳಲಾಗಿದೆ ಎಂದು ಭಾರತೀಯ ಷೇರು ಮಾರುಕಟ್ಟೆಗೆ ಸಲ್ಲಿಸಿದ ಪ್ರತ್ಯೇಕ ಫೈಲಿಂಗ್ಗಳಲ್ಲಿ ಡಾಯ್ಚ್ ಬ್ಯಾಂಕ್ ಎಜಿಯ ಹಾಂಗ್ಕಾಂಗ್ ಶಾಖೆ ತಿಳಿಸಿದೆ.
ಎಸಿಸಿ ಲಿ.ನ ಶೇ. 57ರಷ್ಟು ಹಾಗೂ ಅಂಬುಜಾ ಸಿಮೆಂಟ್ಸ್ನ ಶೇ. 63ರಷ್ಟು ಷೇರುಗಳನ್ನು ಭದ್ರತಾ ರೂಪದಲ್ಲಿ ಬ್ಯಾಂಕು ಪಡೆದುಕೊಂಡಿವೆ.
ಈ ವಹಿವಾಟನ್ನು ವಾಣಿಜ್ಯ ಪರಿಭಾಷೆಯಲ್ಲಿ ನಾನ್ ಡಿಸ್ಪೋಸಲ್ ಅಂಡರ್ಟೇಕಿಂಗ್ ಎನ್ನಲಾಗುತ್ತದೆ. ಅಂದರೆ ಸಾಲವನ್ನು ಮರುಪಾವತಿ ಮಾಡುವವರೆಗೆ ಷೇರುಗಳನ್ನು ಮಾರಾಟ ಮಾಡಲಾಗುವುದಿಲ್ಲ.