ಉಡುಪಿ: ಕಲಾವಿದ, ಸಂಘಟಕ ನಂದಕುಮಾರ್ ಪರ್ಕಳ ನಿಧನ
ಉಡುಪಿ, ಸೆ.19: ಕಲಾವಿದ, ಸಂಘಟಕ ನಂದಕುಮಾರ್ ಪರ್ಕಳ (69) ಸೆ.18ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾಾರೆ.
ಮಂಗಳೂರು ವಿ.ವಿ.ಸರ್ವಕಾಲೇಜು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಇವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಮಣಿಪಾಲ ಪ್ರೆೆಸ್‌ನಲ್ಲಿ ಕೆಲಕಾಲ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ರಂಗಭೂಮಿ ಉಡುಪಿ, ಯಕ್ಷಗಾನ ಕಲಾ ರಂಗ, ತುಳುಕೂಟ ಉಡುಪಿಯಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಇವರು ಉತ್ತಮ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕೆಲವು ಕನ್ನಡ, ಸಿನೆಮಾ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಜೆಸಿಐ, ಲಯನ್ಸ್ ಸಂಸ್ಥೆೆಗಳಲ್ಲಿ ಅಧ್ಯಕ್ಷರಾಗಿ ಮತ್ತು ಪರ್ಕಳ ಬಿಲ್ಲವ ಸಂಘಟನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.