ಮಂಗಳೂರು: ಕಡಲ ತೀರದಲ್ಲಿ ಎನ್.ಎಸ್. ಎಸ್ ನಿಂದ ಸ್ವಚ್ಛತಾ ಅಭಿಯಾನ
ಮಂಗಳೂರು: ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಪ್ರಾದೇಶಿಕ ಕಛೇರಿ, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಹಬಾಗಿತ್ವದಲ್ಲಿ ಕಡಲ ತೀರ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಉಳ್ಳಾಲ ಸೋಮೇಶ್ವರ ಕಡಲ ಕಿನಾರೆಯಲ್ಲಿ ಶನಿವಾರ ನಡೆಯಿತು.
ಮಂಗಳೂರು ಸಂಚಾರ ವಿಭಾಗದ ಎಸಿಪಿ ಗೀತಾ ಡಿ. ಕುಲಕರ್ಣಿ ಚಾಲನೆ ನೀಡಿದರು. ಸ್ವತಃ ತಾವೇ ಕಸ ಹೆಕ್ಕುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಕಾರ್ಯದ ಬಗ್ಗೆ ಹುಮ್ಮಸ್ಸು ತುಂಬಿದರು. ಸ್ವಯಂ ಸೇವಕರಿಗೆ ಸಮುದ್ರ ತಟದಲ್ಲಿ ಜಾಗೃತರಾಗಿರುವಂತೆ ಕರೆ ನೀಡಿದರು.
ಅಭಿಯಾನದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಗಳಾದ ಆಲ್ವಿನ್, ಕ್ಯಾರೆಲ್ ಪಿರೇರಾ, ಮಂಗಳ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಲಾಲು ಕೃಷ್ಣ, ಸ್ಥಳೀಯ ಮುಖಂಡ ದಿನೇಶ್ ಕಾಜವ ಮತ್ತಿರರು ಉಪಸ್ಥಿತರಿದ್ದರು. ಸುಮಾರು 120 ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಕಾರ್ಯಕ್ರಮ ಆಯೋಜಿಸಿದ್ದರು.