ಮಲ್ಪೆ: ಮಾದಕ ವಸ್ತು ಸೇವನೆ ಪ್ರಕರಣ- ಹೂಡೆಯ ಯುವಕ ವಶಕ್ಕೆ

ಮಲ್ಪೆ ಸೆ.17(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪಡುತೋನ್ಸೆ ಗ್ರಾಮ ದ ಹೂಡೆ ಉರ್ದುಶಾಲೆ ಎದುರು ಯುವಕನೋರ್ವನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಫ್ ಎಮ್ ನಾಜಿಲ್(28) ಪೊಲೀಸರು ವಶಕ್ಕೆ ಪಡೆದ ಯುವಕ. ಮಲ್ಪೆ ಠಾಣೆಯ ಪೊಲೀಸರು ಕರ್ತವ್ಯದಲ್ಲಿ ಇದ್ದ ವೇಳೆ ಪಡುತೋನ್ಸೆ ಗ್ರಾಮದ ಹೂಡೆಯ ಉರ್ದುಶಾಲೆ ಎದುರು ಯುವಕನೋರ್ವ ಅಮಲಿನಲ್ಲಿರುವುದನ್ನು ಕಂಡು ಆತ ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!