ಮಲ್ಪೆ: ಹೋಟೆಲ್’ಗೆ ನುಗ್ಗಿ ಸಿಬ್ಬಂದಿಗಳಿಗೆ ಹಲ್ಲೆ
ಮಲ್ಪೆ ಸೆ.17 (ಉಡುಪಿ ಟೈಮ್ಸ್ ವರದಿ): ಇಲ್ಲಿನ ಹೋಟೆಲ್ ವೊಂದರ ಎದುರಿನ ತೋಡಿಗೆ ಮಣ್ಣು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಮಲ್ಪೆಯ ರೆಸಾರ್ಟ್ ಹೋಟೆಲ್ ವೊಂದರ ನಿರ್ದೇಶಕರಾಗಿರುವ ಪ್ರತಿಮಾ ಮನೋಹರ್ ಅವರು ಪೊಲೀಸರಿಗೆ ದೂರು ನೀಡಿದ್ದು. ಸೆ.15 ರಂದು 10-12 ಮಂದಿ ಅಪರಿಚಿತರು ಪ್ರತಿಮಾ ಮನೋಹರ್ ಅವರ ಹೋಟೆಲ್ ನ ಎದುರು ಇರುವ ತೋಡಿಗೆ ಮಣ್ಣು ಹಾಕಿದ್ದು, ಇದಕ್ಕೆ ಹೋಟೆಲ್ ನ ಸಿಬ್ಬಂದಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸೆ.16 ರಂದು ಬೆಳಿಗ್ಗೆ ಮತ್ತೆ 10 ರಿಂದ 12 ಮಂದಿ ಅಪರಿಚಿತ ಹೋಟೆಲ್ ನ ಅವರಣದ ಒಳಗೆ ಅಕ್ರಮ ಪ್ರವೇಶ ಮಾಡಿ ಎದುರು ಇರುವ ತೋಡಿಗೆ ಲಾರಿಯಲ್ಲಿ ಮಣ್ಣನ್ನು ತಂದು ಹಾಕಿದ್ದರು. ಈ ವೇಳೆ ಇದಕ್ಕೆ ಹೋಟೆಲ್ ಸಿಬ್ಬಂದಿಯವರು ಮತ್ತೆ ಆಕ್ಷೇಪ ವ್ಯಕ್ತ ಪಡಿಸಿದಾಗ ಅಪರಿಚಿತರು ಸಿಂಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ದೈಹಿಕ ಹಲ್ಲೆ ಮಾಡಿ ,ಜೀವ ಬೆದರಿಕೆ ಹಾಕಿ ನಷ್ಟವುಂಟು ಮಾಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.