ಕುಂದಾಪುರ: ಯುವಕ ಆತ್ಮಹತ್ಯೆ
ಅಮಾಸೆಬೈಲು ಸೆ.17(ಉಡುಪಿ ಟೈಮ್ಸ್ ವರದಿ): ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ಎಂಬಲ್ಲಿ ನಡೆದಿದೆ.
ಅತ್ತಿಕೊಡ್ಲು ನಿವಾಸಿ ವಿನಯ್ ಕುಮಾರ್ ಶೆಟ್ಟಿ (33) ಮೃತಪಟ್ಟವರು.
ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸಮಾಡಿಕೊಂಡಿದ್ದ ಅವರು ಆಗಲೇ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಬಳಿಕ ಊರಿಗೆ ಬಂದು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಆದರೆ ಅವರು ವೈದ್ಯರು ಹೇಳಿದಂತೆ ಸರಿಯಾಗಿ ಔಷಧಿ ತೆಗೆದುಕೊಳ್ಳದೇ ಇರುವುದರಿಂದ ಖಾಯಿಲೆ ಗುಣ ಮುಖವಾಗಿರುವುದಿಲ್ಲ. ಸೆ.15 ರಂದು ಜೋರಾಗಿ ಬೊಬ್ಬೆ ಹೊಡೆಯುತ್ತಾ ಅತಿರೇಕವಾಗಿ ವರ್ತಿಸುತ್ತಿದ್ದ ಅವರು ರಾತ್ರಿ ವೇಳೆ ಮನೆಯ ಹತ್ತಿರವಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಅಣ್ಣ ನವೀನ್ ಕುಮಾರ್ ಶೆಟ್ಟಿ ಅವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4, ಬೆಂಗಳೂರು.