ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗದಿಂದ ಗೋಪೂಜೆ
ಉಡುಪಿ ಸೆ.17(ಉಡುಪಿ ಟೈಮ್ಸ್ ವರದಿ): ಪುಣ್ಯಕೋಟಿ ಗೋಸೇವಾ ಬಳಗ ಕುಕ್ಕಿಕಟ್ಟೆ ಇದರ 76 ನೇ ತಿಂಗಳ ಗೋಪೂಜೆಯು ಮಣಿಪುರ ಗ್ರಾಮದ ಕಲ್ಮಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಅನಂತ್ ಭಟ್ ಮನೆಯಲ್ಲಿ ನಡೆಯಿತು.
ಈ ವೇಳೆ ಗೋವುಗಳನ್ನು ಸಿಂಗರಿಸಿ,ನವಧಾನ್ಯ ಹಾಗೂ ಅವಲಕ್ಕಿನ್ನು ತಿನ್ನಸಿ, ಶೋಭಾನೆ ಹಾಡಿನ ಮುಖಾಂತರ ಆರತಿಯನ್ನು ಬೆಳಗಿಸಿ ಮುತೈದೆಯರು ಗೋ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗೋಸೇವಾ ಬಳಗದ ಪ್ರಮುಖರಾದ ಜ್ಯೋತಿ ಎಸ್. ದೇವಾಡಿಗ, ತಾರಾ ಉಮೇಶ್ ಆಚಾರ್ಯ, ಸರೋಜಾ ಯಶವಂತ್, ರಶ್ಮಿ ರಮೇಶ್ ಶೆಣೈ, ರೇವತಿ ರಮಾನಂದ್ ಶೆಟ್ಟಿ, ರಜನಿ ಆಚಾರ್ಯ, ಶಾಂತಾ ಶೇರಿಗಾರ್ ಕೊಳಂಬೆ, ಕುಸುಮಾ ಶೇರಿಗಾರ್, ಅನಿತಾ ನಾಯಕ್, ಮಾಲತಿ ಗಿರೀಶ್ ಭಟ್, ಭಾರತಿ ಜಯ ಪೂಜಾರಿ, ಜಯಂತಿ ಆಚಾರ್ಯ, ಅಭಿಜಿತ್ ಆಚಾರ್ಯ, ಹಾಗೂ ಕಲ್ಮಂಜೆ ಶ್ರೀಬೊಬ್ಬರ್ಯ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ಸುಜಯಾ ಸುರೇಶ್, ಕಾರ್ಯದರ್ಶಿ ಸುಜಾತ ಲಕ್ಷ್ಮೀಶ್ ಪೂಂಜಾ, ಅನಂತ್ ಭಟ್, ಸತ್ಯವತಿ ಅನಂತ್ ಭಟ್, ಅಶ್ವತ್ ಭಟ್ ಉಪಸ್ಥಿತರಿದ್ದರು.