ಬೈಂದೂರು: ನಿಲ್ಲಿಸಿದ್ದ ಲಾರಿಯ 1.85 ಲಕ್ಷ ರೂ. ಮೌಲ್ಯದ 5 ಚಕ್ರ ಕಳವು

ಕಡತ ಚಿತ್ರ

ಬೈಂದೂರು ಸೆ.16(ಉಡುಪಿ ಟೈಮ್ಸ್ ವರದಿ): ತಾಲೂಕಿನ ಶಿರೂರು ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ ಚಕ್ರಗಳನ್ನು ಕಳವು ಮಾಡಿರುವ ಘಟನೆ ಸೆ.14 ರ ರಾತ್ರಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಲಾರಿ ಚಾಲಕ ಪುರುಷೋತ್ತಮ ತಾಂಡೇಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅವರು ಸೆ.14 ರಂದು ತಮ್ಮ ಮನೆಯಿಂದ ಲಾರಿಯಲ್ಲಿ ಮಗ ಸಾಹಿಲ್ ನ ಜೊತೆಯಲ್ಲಿ ಹೊರಟಿದ್ದರು. ರಾತ್ರಿ 9 ಗಂಟೆ ವೇಳೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ನಿಲ್ಲಿಸಿ ಮಗನೊಂದಿಗೆ ಲಾರಿಯಲ್ಲಿ ಮಲಗಿದ್ದರು. ಮರುದಿನ ಸೆ.15 ರಂದು ಬೆಳಿಗ್ಗೆ 4 ಗಂಟೆ ವೇಳೆ, ಎದ್ದು ಹೊರಡಲು ಲಾರಿಯನ್ನು ಸ್ಟಾರ್ಟ್ ಮಾಡಲು ಮುಂದಾದಾಗ ಲಾರಿಯು ಒಂದು ಭಾಗಕ್ಕೆ ವಾಲಿಕೊಂಡಿದ್ದು ಗಮನಕ್ಕೆ ಬಂದಿದೆ. ಕೂಡಲೇ ಲಾರಿಯನ್ನು ಪರಿಶೀಲಿಸಿದಾಗ ಲಾರಿಯ ಹಿಂದಿನ 4 ಚಕ್ರಗಳು ಹಾಗೂ ಹೆಚ್ಚುವರಿಯಾಗಿ ಇಟ್ಟಿದ್ದ ಚಕ್ರವೂ ಕಳವಾಗಿರುವುದು ಕಂಡು ಬಂದಿದೆ. ಅದರಂತೆ ರಾತ್ರಿ ಕಳ್ಳರು ಲಾರಿಯ 5 ಚಕ್ರಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 5 ಚಕ್ರಗಳ ಮೌಲ್ಯ 1,85,000 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!