ಮನೆಯಿಂದ ಸಾಕು ನಾಯಿ ಕಳುಹಿಸಲು ನಿರಾಕರಣೆ- ತಾಯಿ ಮಗಳು ಆತ್ಮಹತ್ಯೆ!

ಬೆಂಗಳೂರು ಸೆ.15 : ಸಾಕು ನಾಯಿಯನ್ನು ಮನೆಯಿಂದ ಕಳುಹಿಸಲು ಒಪ್ಪದ ಕಾರಣ ಅತ್ತೆ ಮಾವನೊಂದಿಗೆ ಜಗಳವಾಡಿ  ಮನನೊಂದ ಸೊಸೆ ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ದಿವ್ಯಾ ಹಾಗೂ ಆಕೆಯ ಮಗಳು ಎಂದು ಗುರುತಿಸಲಾಗಿದೆ.

ಮೂರು ದಿನಗಳ ಹಿಂದೆ ನಡೆದಿದ್ದು, ದಿವ್ಯಾ ಹಾಗೂ ಮಗಳು ಮೃತ ದುರ್ದೈವಿಗಳು. ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ನಾಯಿ ಇದ್ದರೆ ಅಸ್ತಮಾ ಸಂಬಂಧಿ ಅಲರ್ಜಿ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ದಿವ್ಯಾ ಅವರ ಅತ್ತೆ- ಮಾವ ಮನೆಯಲ್ಲಿ  ಸಾಕುತ್ತಿದ್ದ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ ಮಾವನಿಗೆ ಹೇಳಿದ್ದರು. ಆದರೆ ನಾಯಿಯನ್ನು ಮನೆಯಿಂದ ಕಳಿಸಲು ಅತ್ತೆ ಮಾವ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ ಮಾವನ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಮನನೊಂದು ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಈ ಬಗ್ಗೆ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!