ಕ್ಯಾನ್ಸರ್ ಸೇರಿದಂತೆ 34 ಅಗತ್ಯ ಔಷಧಗಳ ದರ ಇಳಿಕೆ

ನವದೆಹಲಿ ಸೆ.14: ಕ್ಯಾನ್ಸರ್ ಸೇರಿದಂತೆ 34 ಖಾಯಿಲೆಗಳ ಚಿಕಿತ್ಸೆಗೆ ಬಳಸು ಅಗತ್ಯ ಔಷಧಗಳ ದರವನ್ನು ಕೇಂದ್ರ ಸರಕಾರ ಕಡಿಮೆ ಮಾಡಿದೆ.

ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧ, ಸೋಂಕು ನಿರೋಧಕ ಔಷಧಗಳು ಸೇರಿದಂತೆ ಒಟ್ಟು 34 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಈ ಔಷಧಗಳ ದರವು ಸ್ವಲ್ಪಮಟ್ಟಿಗೆ ಇಳಿಯಲಿದ್ದು, ಕೈಗೆಟುಕುವಂತೆ ಇರಲಿದೆ.

ಪರಿಷ್ಕøತ ಪಟ್ಟಿ ಬಿಡುಗಡೆ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಅವರು, 27 ವರ್ಗದಲ್ಲಿ ಒಟ್ಟು 384 ಔಷಧಗಳು ಪಟ್ಟಿಯಲ್ಲಿವೆ. ಹಲವು ರೋಗ ನಿರೋಧಕ ಔಷಧಗಳು, ಲಸಿಕೆಗಳು, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು ಇವೆ. ಇವು, ಇನ್ನಷ್ಟು ಕೈಗೆಟಕುವ ದರಕ್ಕೆ ಲಭ್ಯವಾಗಲಿದ್ದು, ರೋಗಿಗಳ ಮೇಲಿನ ಆರ್ಥಿಕ ಹೊರೆ ಇಳಿಯಲಿದೆ’ ಎಂದು  ತಿಳಿಸಿದ್ದಾರೆ.

ಸದ್ಯ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಸೇರಿರುವ ಔಷಧಗಳ ಒಟ್ಟು ಸಂಖ್ಯೆ 384ಕ್ಕೆ ಏರಿದೆ. ಇದರೊಂದಿಗೆ ರ್ಯಾನಿಟೈಡೈನ್, ಸುಕ್ರಲ್‍ಫೇಟ್, ವೈಟ್ ಪೆಟ್ರೊಲಾಟಂ, ಅಟೆನೊಲೊಲ್ ಸೇರಿದಂತೆ 26 ಔಷಧಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹಾಗೂ ಔಷಧಗಳ ದರ ಮತ್ತು ಪರ್ಯಾಯವಾಗಿ ಇನ್ನೂ ಉತ್ತಮ ಔಷಧಗಳು ಲಭ್ಯವಿದೆ ಎಂಬ ಮಾನದಂಡ ಆಧಾರದಲ್ಲಿ ಇವುಗಳನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!