ಹಳೆಯಂಗಡಿ: ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳೆಯಯಂಗಡಿ ಮುಖ್ಯ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕ ನನ್ನ ಪಕ್ಷಿ ಕೆರೆ ಹೊಸಕಾಡು ನಿವಾಸಿ ಚರಣ್ ರಾಜ್(28)ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಉಡುಪಿಯತ್ತ ಸಂಚರಿಸುತ್ತಿದ್ದ ಟ್ಯಾಂಕರ್ ನ ಚಕ್ರಕ್ಕೆ ಮುಖ್ಯ ಜಂಕ್ಷನ್ ನ ಬ್ಯಾರಿ ಕೇಡ್ ಬಳಿಯಲ್ಲಿ ಸಿಲುಕಿದ ಚರಣ್ ರಾಜ್ ಸ್ಥಳದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ .