ಭಾರತ್ ಜೋಡೋ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ರಮ: ಸೊರಕೆ
ಉಡುಪಿ: ಭಾರತ್ ಜೋಡೋ ಕಾರ್ಯಕ್ರಮವು ಪ್ರಜಾಪ್ರಭುತ್ವ, ಸಂವಿಧಾನದಡಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ರಮ. ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟು ಉದ್ದದ ಪಾದಯಾತ್ರೆಯನ್ನು ಮಾಡಲಾಗುತ್ತಿದೆ.
ಇವತ್ತು ಆಡಳಿತರೂಢ ಪಕ್ಷ ಧರ್ಮ ಧರ್ಮ ಜಾತಿ ಜಾತಿಗಳ ನಡುವೆ ವಿಭಜನೆ ಮಾಡುವಂತಹ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಂದು ಕುಟುಂಬ ಎನ್ನುವ ರೀತಿಯಲ್ಲಿ ಒಗ್ಗೂಡಿಸುತ್ತಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ನಾತನಾಡಿದ ಅವರು, ನಮ್ಮ ದೇಶದಲ್ಲಿ ವಿವಿಧ ಜಾತಿ ಮತ ಭೇದದ ಜನರಿದ್ದು ಅವರನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸುವ ಕಾರ್ಯ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಆಡಳಿತ ರೂಢಪಕ್ಷ ಜನರನ್ನು ವಿಭಜಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಗ್ಗೂಡಿಸುತ್ತಿದೆ ಎಂದರು.