ಪಡುಬಿದ್ರೆ/ಹಿರಿಯಡ್ಕ/ ಮಲ್ಪೆ,/ಬ್ರಹ್ಮಾವರ- ಮಾದಕ ವಸ್ತು ಸೇವನೆ ನಾಲ್ವರು ವಶಕ್ಕೆ
ಉಡುಪಿ ಸೆ.13(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಾಲ್ವರ ವಿರುದ್ಧ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ್ ಕರ್ಕೇರ, ಪ್ರಜ್ವಲ್ (26), ರೋಬನ್ ಡಿ’ ಅಲ್ಮೇಡಾ (21), ಪವಾಡಪ್ಪ ಬಿ.ಬೆಳಗಲ್ (28), ಎನ್ ಸ್ಟೀಫನ್(23) ಪೊಲೀಸರು ವಶಕ್ಕೆ ಪಡೆದವರು.
ಯುವಕರು ಗಾಂಜಾ ಸೇವಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಹೆಜಮಾಡಿ ಕೋಡಿ ಎಂಬಲ್ಲಿ ಸಾಗರ್ ಕರ್ಕೇರ, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಇವರಿಗೆ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪ್ರಜ್ವಲ್ ಎಂಬಾತನ್ನು ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ 52ನೇ ಹೇರೂರು ಗ್ರಾಮದ ಕೆ.ಇ.ಬಿ ಕ್ವಾಟ್ರಸ್ ಬಳಿ ರೋಬನ್ ಡಿ’ ಅಲ್ಮೇಡಾ, ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿ ಪವಾಡಪ್ಪ ಬಿ. ಬೆಳಗಲ್ ಎಂಬಾತನನ್ನು ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಡವೂರು ಗ್ರಾಮದ ತೆಂಕನಿಡಿಯೂರುವಿನ ಗರಡಿಮಜಲು ಎಂಬಲ್ಲಿ ಎನ್ ಸ್ಟೀಫನ್ ಎಂಬಾತನನ್ನು ಗಾಂಜಾ ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ಈ ನಾಲ್ವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ವಿರುದ್ಧ ಪಡುಬಿದ್ರೆ, ಹಿರಿಯಡ್ಕ, ಮಲ್ಪೆ ಠಾಣೆಯಲ್ಲಿ ತಲಾ 1 ಹಾಗೂ ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ.