ಉಡುಪಿಯಲ್ಲಿ ಅ.2 ರಂದು ದುರ್ಗಾದೌಡ್- ಕಾರ್ಯಾಲಯ ಉದ್ಘಾಟನೆ
ಉಡುಪಿ: ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ಅಕ್ಟೋಬರ್ 2 ರಂದು ನಡೆಯಲಿರುವ ದುರ್ಗಾದೌಡ್ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆ ಪೇಜಾವರ ವಿಜಯಧ್ವಜ ವಸತಿ ನಿಲಯದ ಸಭಾಗೃಹದಲ್ಲಿ ನಡೆಯಿತು.
ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಹಿಂಜಾವೇ ಪ್ರಾಂತ ಸಮಿತಿಸದಸ್ಯ ಕಿಶೋರ್ ಕುಮಾರ್ ಮಂಗಳೂರು ಕೆ ರಾಘವೇಂದ್ರ ಕಿಣಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಿಂಜಾವೇ ಪ್ರಾಂತ ಸಮಿತಿಯ ಹರೀಶ್ ಶಕ್ತಿ ನಗರ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಬೆಯ ಶೆಟ್ಟಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಿಟ್ಟೂರು. ಮಹಿಳಾ ಮೋರ್ಚಾ ಬಿಜೆಪಿ ವೀಣಾ ಶೆಟ್ಟಿ, ಗೀತಾಂಜಲಿ, ಬಿಜೆಪಿ ಪ್ರಮುಖರಾದ ಪ್ರಭಾಕರ ಪೂಜಾರಿ ಗುಂಡಿಬೈಲು, ಶ್ರೀಕಾಂತ್ ನಾಯಕ್ ಅಲೆವೂರು, ಹಿಂಜಾವೇ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ಮಹೇಶ್ ಬೈಲೂರು, ಉಮೇಶ್ ನಾಯ್ಕ ಸೂಡ, ಪ್ರವೀಣ್ ಯಕ್ಷಿಮಠ, ಪ್ರಶಾಂತ್ ನಾಯಕ್ ಕಾರ್ಕಳ ಮತ್ತಿತರು ಉಪಸ್ಥಿತರಿದ್ದರು.