ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ- ದಿನೇಶ್ ಗುಂಡೂರಾವ್

ಬೆಂಗಳೂರು, ಸೆ.6: ಬಡತನ ರೇಖೆಗಿಂತ ಕೆಳಗಿರುವ ಎಸ್.ಸಿ, ಎಸ್.ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಸುತ್ತೋಲೆ ಹಿಂಪಡೆದ ವಿಚಾರವಾಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು “ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ರಾಜ್ಯದ ಬಿಜೆಪಿ ಸರ್ಕಾರ ಕೇವಲ 15 ದಿನದ ಹಿಂದಷ್ಟೇ ಎಸ್ ಸಿ/ಎಸ್ ಟಿ ಸಮುದಾಯದ ಬಿಪಿಎಲ್ ಕಾರ್ಡ್ ದಾರರಿಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ ಈಗ ಏಕಾಏಕಿ ಹಿಂಪಡೆದಿದೆ. ಬೊಮ್ಮಾಯಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ನಾಟಕ ಯಾಕೆ ಆಡಬೇಕು.? ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ” ಎಂದು ಪ್ರಶ್ನಿಸಿದ್ದಾರೆ.

ಉಚಿತ ವಿದ್ಯುತ್‍ಗಾಗಿ ಎಸ್ ಸಿ/ಎಸ್ ಟಿ ಸಮುದಾಯದವರು ಈ ಸರ್ಕಾರಕ್ಕೇನು ಅರ್ಜಿಯೂ ಹಾಕಿರಲಿಲ್ಲ, ಭಿಕ್ಷೆಯೂ ಬೇಡಿರಲಿಲ್ಲ. ಸ್ವತಃ ಸರ್ಕಾರವೇ 75 ಯುನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ, ಈಗ ಸದ್ದೇ ಇಲ್ಲದೆ ವಾಪಾಸ್ ಪಡೆದಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ. ಈ ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲವೇ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!