ಉದ್ಯಮಿಗಳಿಗೆ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ: ರಾಹುಲ್ ಗಾಂಧಿ
ನವದೆಹಲಿ: ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಉದ್ಯಮಿಗಳ ತೆರಿಗೆ ಕಡಿತಗೊಳಿಸುವ ಬದಲು ಬಡವರಿಗೆ ಹಣ ನೀಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ಆರ್ಥಿಕ ವಿಪತ್ತು ಕಣ್ಮರೆಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆರ್ಥಿಕತೆಯ ಬೇಡಿಕೆ ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ವರ್ಷದಲ್ಲಿ ಒಟ್ಟು ಬೇಡಿಕೆಯ ಮೌಲ್ಯಮಾಪನದ ಆಘಾತ ತೀವ್ರವಾಗಿದೆ ಎಂದು ಸೂಚಿಸುತ್ತದೆ ಎಂದು ಮಂಗಳವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಹಲವು ತಿಂಗಳುಗಳಿಂದ ನೀಡುತ್ತಿದ್ದ ಎಚ್ಚರಕೆಯನ್ನು ಆರ್ ಬಿ ಐ ಈಗ ದೃಢಪಡಿಸಿದೆ, ಬಡವರಿಗೆ ಹಣವನ್ನು ನೀಡಿ, ಕೈಗಾರಿಕೋದ್ಯಮಿಗಳಿಗೆ ತೆರಿಗೆ ಕಡಿತ ಮಾಡಬೇಡಿ. ಬಳಕೆ ಮಾಡುವುದರ ಮೂಲಕ ಆರ್ಥಿಕತೆಯನ್ನು ಪುನರಾರಂಭಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.ನಷ್ಟವನ್ನು ಮರಳಿ ಪಡೆಯಲು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯು ಹಾದಿಗೆ ಮರಳಲು ವ್ಯಾಪಕವಾದ “ಸುಧಾರಣೆಗಳು ಅಗತ್ಯವಿದೆ ಎಂದು ಆರ್ ಬಿ ಐ ಹೇಳಿತ್ತು.