ಚೌತಿ ಸಹಿತ ಎಲ್ಲಾ ಹಬ್ಬಗಳಿಗೆ ಪೆಂಡಾಲ್‌ ನಿರ್ಮಾಣಕ್ಕೆ ಅವಕಾಶ ಬೇಡ: ಎನ್‌ಜಿಟಿ

ನವದೆಹಲಿ: ಗಣೇಶ ಚತುರ್ಥಿ, ದುರ್ಗಾಪೂಜೆ ಸೇರಿ ಹಬ್ಬಗಳ ಆಚರಣೆ ವೇಳೆ ಪೆಂಡಾಲ್‌ಗಳು, ತಾತ್ಕಾಲಿಕ ಡೇರೆಗಳು ಮತ್ತು ಸ್ವಾಗತ ಕಮಾನುಗಳನ್ನು ರಸ್ತೆಗಳಲ್ಲಿ ನಿರ್ಮಿಸಲು ಅವಕಾಶ ನೀಡದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಜಿಲ್ಲಾಡಳಿತಗಳಿಗೆ ಆದೇಶ ನೀಡಿದೆ. 

‘ಪೆಂಡಾಲ್‌ಗಳು ಮತ್ತು ಸ್ವಾಗತ ಕಮಾನುಗಳನ್ನು ನಿರ್ಮಿಸುವ ವಿಚಾರವನ್ನು ಜಿಲ್ಲಾಡಳಿತಗಳು ಗಂಭೀರವಾಗಿ ಪರಿಗಣಿಸಬೇಕು. ರಸ್ತೆಗಳ ಮೇಲೆ ಅಂಥವನ್ನು ನಿರ್ಮಿಸಲು ಅನುಮತಿ ನೀಡಬಾರದು’ ಎಂದು ಸೂಚಿಸಿದೆ.

‘ಅನುಮತಿ ಇಲ್ಲದೇ ಪೆಂಡಾಲ್‌ಗಳನ್ನು ನಿರ್ಮಿಸಿದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ನಿರ್ಮಿಸಿದವರಿಗೆ ದಂಡ ವಿಧಿಸಬೇಕು’ ಎಂದು ಎನ್‌ಜಿಟಿ ನೀಡಿರುವ ಆದೇಶದಲ್ಲಿ ಹೇಳಲಾಗಿದೆ.

ಪೆಂಡಾಲ್‌ಗಳಂಥ ನಿರ್ಮಾಣಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತವೆ ಎಂದು ಛತ್ತೀಸಗಡದ ಸ್ವಯಂಸೇವಕ ಸಂಸ್ಥೆಯಾದ ‘ನಾಗರಿಕ ಸಂಘರ್ಷ ಸಮಿತಿ’ಯು ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಎನ್‌ಜಿಟಿ ಈ ಆದೇಶ ಹೊಡಿಸಿದೆ. 

ಕಾರ್ಯಕ್ರಮಗಳ ಆಯೋಜಕರು ಶಬ್ದದ ಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವಂತೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸ್ಥಳೀಯ ಆಡಳಿತಗಳು ನಿಗಾವಹಿಸಬೇಕು ಎಂದೂ ಎನ್‌ಜಿಟಿ ಹೇಳಿದೆ. 

Leave a Reply

Your email address will not be published. Required fields are marked *

error: Content is protected !!