ಸರ್ಕಾರದಲ್ಲಿ ನೌಕರಿ ಬೇಕೆಂದರೆ ಯುವಕರು ಲಂಚ, ಯುವತಿಯರು ಮಂಚ ಹತ್ತಬೇಕು- ಪ್ರಿಯಾಂಕ್ ಖರ್ಗೆ

ಕಲಬುರಗಿ: ಇವತ್ತು ಯುವಕರಿಗೆ ಕೆಲಸ, ನೌಕರಿ ಸಿಗಬೇಕೆಂದರೆ ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದು ಲಂಚ-ಮಂಚದ ಸರ್ಕಾರ ಎಂದು ಕಾಂಗ್ರೆಸ್ ನಾಯಕ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಲಂಚ ಮಂಚದ ಸರಕಾರ. ಯುವಕರಿಗೆ ನೌಕರಿ ಬೇಕೆಂದರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು. ಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಯುವಕರ ಭವಿಷ್ಯದ ಜೊತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಪ್ರತಿಯೊಂದು ಹುದ್ದೆಗಳು ಮಾರಾಟಕ್ಕಿದೆ. ಹಣ ಕೊಟ್ಟರೆ ಬಿಜೆಪಿ ಸರ್ಕಾರ ಏನು ಬೇಕಾದರೂ ಮಾಡಲು ಸಿದ್ಧ. ಈ ಸರ್ಕಾರ ಮೇಲೆ ಯುವಕರು ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.

ಮಂತ್ರಿ ಮಂಡಲದ ಮೇಲೆ ಸಿಎಂಗೆ ಹಿಡಿತವಿಲ್ಲ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ಗೆ ಬಿಜೆಪಿ ಅವರ ಮೇಲೆ ಹಿಡಿತ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ಅವರೇ ಬೆಂಕಿ ಹಚ್ಚುತ್ತಿದ್ದಾರೆ. ನಾವು ಬೆಂಕಿ ಹತ್ತಿದೆ ಅಂತಾ ಹೇಳಿದರೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು. 

ದುಡ್ಡು ಕೊಡದಿದ್ದರೆ ಈ ಸರ್ಕಾರದಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ್ದು ಶೂನ್ಯ ಸಾಧನೆ ಎಂದರು. ಹಿಂದೆ ಇಬ್ಬರು ಮಂತ್ರಿಗಳು ಈ ವಿವಾದದಲ್ಲಿ ರಾಜೀನಾಮೆ ನೀಡಿದ್ದಾರೆ. ಈ 40 ಪರ್ಸೆಂಟ್ ಸರ್ಕಾರ ಯುವಕರ ವಿರೋಧಿ ಸರ್ಕಾರವಾಗಿದೆ. 8 ವರ್ಷದ ಹಿಂದೆ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಸರ್ಕಾರದ ಅಂಕಿಅಂಶವೇ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ತೋರಿಸಿದೆ ಎಂದರು.

ಖಾಲಿಯಾಗಿರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. ಸಚಿವ ಪ್ರಭು ಚೌಹಾನ್ ಆಪ್ತ ಜ್ಞಾನದೇವ ಜಾಧವ್ ಅನೇಕ ಹುದ್ದೆಗಳನ್ನು ಕೊಡಿಸುವದಾಗಿ ಹೇಳಿ ವಂಚಿಸಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಕೆಪಿಟಿಸಿಎಲ್​ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರು ಮೂರು ಲಕ್ಷಕ್ಕೂ ಹೆಚ್ಚು ಜನ. ಈ ಪರೀಕ್ಷೆಯನ್ನು ಕೂಡ ಸರ್ಕಾರ ಪಿಎಸ್ಐ ಪರೀಕ್ಷೆ ನಡೆಸಿದಂತೆ ನಡೆಸಿದೆ ಎಂದು ಹೇಳಿದರು.

ದೇಶಭಕ್ಕಿಯನ್ನು ಮಾರಾಟಕ್ಕಿಟ್ಟಿದ್ದಾರೆ: ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದೆ. ಸರ್ಕಾರವು ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಧ್ವಜ ಸಂಹಿತೆ ಬದಲಾಯಿಸಿ, ಪಾಲಿಯಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದಾರೆ. ಪಾಲಿಸ್ಟರ್ ಧ್ವಜ ತಯಾರಿಸುತ್ತಿರುವುದು ರಿಲಯನ್ಸ್ ಗ್ರೂಪ್​. ದೇಶಭಕ್ತಿಯನ್ನೂ ಇವರು ಅದಾನಿ ಮತ್ತು ಅಂಬಾನಿ ಕಂಪನಿಗೆ ಅಡ ಇಟ್ಟಿದ್ದಾರೆ ಎಂದು ಟೀಕಿಸಿದರು. 

ಹೈಕಮಾಂಡ್ ಮಟ್ಟದಲ್ಲಿ ನಾನಾ, ನೀನಾ ಎಂಬ ಹಗ್ಗಜಗ್ಗಾಟ: ಡಬಲ್ ಸ್ಟೇರಿಂಗ್ ಪಕ್ಷ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ!

ರಾಯರು ನನಗೆ ಎಲ್ಲ ಕೊಟ್ಟಿದ್ದಾರೆ, ಸಂತೋಷವಾಗಿದ್ದೇನೆ, ನಿಶ್ಚಿತವಾಗಿಯೂ ಬೊಮ್ಮಾಯಿ ಅವಧಿ ಪೂರ್ಣಗೊಳಿಸುತ್ತಾರೆ: ಬಿ ಎಸ್ ಯಡಿಯೂರಪ್ಪ

ಯಾರೋ ಹೇಳಿದ್ರೆ ಸಿಎಂ ಬದಲಾಗಲ್ಲ, ಬರುವ ಚುನಾವಣೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ: ಬಿ ವೈ ವಿಜಯೇಂದ್ರ

ಸಿಎಂ ಬದಲಾವಣೆ ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿ ಸೃಷ್ಟಿಸಿರುವ ದೊಡ್ಡ ಸುಳ್ಳು: ಎಸ್ ಟಿ ಸೋಮಶೇಖರ್

ಮಹಮ್ಮದ್‌ ಅಲಿ ಜಿನ್ನಾ ಜೊತೆ ಕೈ ಜೋಡಿಸಿ ದೇಶ ಒಡೆದವರು ಕಾಂಗ್ರೆಸ್ಸಿಗರು: ಗೋವಿಂದ ಕಾರಜೋಳ

‘ಕಾಶ್ಮೀರ್ ಫೈಲ್ಸ್’ ಸಿನಿಮಾ ಫ್ರೀಯಾಗಿ ತೋರಿಸುವ ಸರ್ಕಾರಕ್ಕೆ ರಾಷ್ಟ್ರಧ್ವಜ ಉಚಿತವಾಗಿ ನೀಡಲು ಏಕೆ ಸಾಧ್ಯವಿಲ್ಲ: ಕಾಂಗ್ರೆಸ್ ತಪರಾಕಿ

‘ಹರ್ ಘರ್ ತಿರಂಗ’ ಅಭಿಯಾನ ರಾಜಕೀಯ ಕುತಂತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹ: ಮುಖ್ಯಮಂತ್ರಿ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಬೆಂಬಲ

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು!

ಸರ್ಕಾರದ 2ನೇ ವರ್ಷದ ವಾರ್ಷಿಕೋತ್ಸವದಲ್ಲಿ ಬಿಎಸ್‌ವೈ ಕಳಿಸಲಾಗಿತ್ತು, 1ನೇ ವಾರ್ಷಿಕೋತ್ಸವದಲ್ಲಿ ಬೊಮ್ಮಾಯಿ!

ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಟ್ವೀಟ್ ವಾರ್: ಆಗಸ್ಟ್ 15 ರ ನಂತರ ಮಾತನಾಡುತ್ತೇನೆ

Leave a Reply

Your email address will not be published. Required fields are marked *

error: Content is protected !!