ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರ ಸಾಬೀತಾದರೆ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ…
ಬೆಂಗಳೂರು ಜು.23 : ಪಿ.ಎಸ್.ಐ ಹಗರಣದಲ್ಲಿ ಪಾತ್ರ ಸಾಬೀತಾದರೆ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ನನ್ನ ಪಾತ್ರವಿದೆ ಎಂದು ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಪಿ.ಎಸ್.ಐ ಹಗರಣ ಕಾಂಗ್ರೆಸ್ ನವರ ಮನೆ ಬಾಗಿಲಿಗೆ ಬರಲಿದೆ. ಸಿದ್ದರಾಮಯ್ಯ ಅವರು ಹಿರಿಯರು ಈ ರೀತಿಯ ಕಪೋಕಲ್ಪಿತ ಆರೋಪಗಳು ಸರಿಯಲ್ಲ. ಇದರಲ್ಲಿ ನಾನು ಖಂಡಿತ ಭಾಗಿಯಾಗಿಲ್ಲ. ಇಂತಹ ಆರೋಪ ಮಾಡುವುದು ಸರಿಯಲ್ಲ ಈ ಹಗರಣದಲ್ಲಿ ನನ್ನ ಪಾತ್ರವಿದೆ ಎಂದಾದರೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಶಿಕಾರಿಪುರದ ಟಿಕೆಟ್ ಬಗ್ಗೆ ಬಿ.ಎಸ್.ವೈ ಘೋಷಣೆ ಕುರಿತಾಗಿ ಮಾತನಾಡಿದ ಅವರು, ಕುಟುಂಬ ರಾಜಕಾರಣದ ಬಗ್ಗೆ ನಾನು ಒಪ್ಪುವುದಿಲ್ಲ. ನಮ್ಮ ಪಕ್ಷವೂ ಕೂಡ ಈ ಬಗ್ಗೆ ಒಪ್ಪಲ್ಲ. ಬಿಜೆಪಿಯಲ್ಲಿ ಹಲವು ವರ್ಷದಿಂದ ನಾನೂ ದುಡೀತಿದ್ದೇನೆ. ನಿವೃತ್ತಿ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆಂದು ಬಿಎಸ್ ವೈ ನಿನ್ನೆ ಹೇಳಿದ್ದಾರೆ. ನಾನು ಉಪಾಧ್ಯಕ್ಷನಾಗಿ ಅವರ ಮಾತಿಗೆ ಬದ್ದ. ನನ್ನ ಬಗ್ಗೆ ನಾನು ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಒಂದೇ ಮಾತಿನಲ್ಲಿ ಹೇಳಿದ್ದೇನೆ. ಪಕ್ಷದ ನಿರ್ಧಾರ ಪ್ರಕಾರ ನಡೆದುಕೊಳ್ಳುತ್ತೇನೆ. ಪಕ್ಷದ ನಿರ್ಧಾರಕ್ಕೆ ಯಾವಾಗಲೂ ಬದ್ದನಾಗಿದ್ದೇನೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಗೆ ಮೈಸೂರು ಅಥವಾ ಶಿಕಾರಿಪುರದಲ್ಲಿ ಸ್ಪರ್ಧೆಯ ಬಗ್ಗೆ ಮಾತನಾಡಿದ ಅವರು, ನಿನ್ನೆಯ ವಿಚಾರದ ಬಳಿಕ ಅನೇಕ ಚರ್ಚೆಗಳು ಆಗುತ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪ ಈಗ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆಯೂ ಅನೇಕ ನಿರ್ಧಾರ ಮಾಡಿದ್ದಾರೆ. ನಾನು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಮಾಡಬೇಕೆಂದು ಹೈಕಮಾಂಡ್ ಬಯಸಿದೆ. ನಾನು ಪಕ್ಷ ಸಂಘಟನೆ ಮಾಡಲು ಸಿದ್ದನಿದ್ದೇನೆ. ಯಡಿಯೂರಪ್ಪ ಅವರಾಗಿರಬಹುದು, ಬೇರೆಯವರೇ ಆಗಿರಬಹುದು. ತಮ್ಮ ಮಕ್ಕಳು ಪರಿಶ್ರಮದಿಂದ ಮೇಲೆ ಬರಬೇಕೆಂದು ಬಯಸುತ್ತಾರೆ. ವಿಜಯೇಂದ್ರಗೆ ಶಕ್ತಿ ಇದೆ, ತಾಕತ್ ಇದೆ ಅನ್ನೋದು ಅವರಿಗೆ ಅನಿಸಿದರೆ ಜವಾಬ್ದಾರಿ ಕೊಡುತ್ತಾರೆ ಎಂದು ಹೇಳಿದರು.