ಕಾಪು: ಸುಂಟರಗಾಳಿಗೆ ಎರಡು ಮನೆ ಹಾಗೂ ಆವರಣ ಗೋಡೆ ಕುಸಿತ, ಇಬ್ಬರಿಗೆ ಗಾಯ

ಉಡುಪಿ: ಕಳತ್ತೂರು ಹಾಗೂ ಪಾದೂರು ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಬೀಸಿದ ಸುಂಟರಗಾಳಿಗೆ ಎರಡು ಮನೆ ಹಾಗೂ ಆವರಣ ಗೋಡೆ ಕುಸಿತವಾಗಿ ಇಬ್ಬರು ಗಾಯಗೊಂಡಿದ್ದಾರೆ.

ಬಿರುಗಾಳಿಗೆ ಮನೆಯ ಚಾವಣಿ ಹಾರಿಹೋಗಿದ್ದು, ಈ ಸಂದರ್ಭ ಮನೆಯೊಳಗಿದ್ದ ಶಾಮಲಾ ಮಡಿವಾಳ ಹಾಗೂ ಮೂರ್ತಿ ಎಂಬುವರ ತಲೆಗೆ ಹೆಂಚು ತುಂಡು ಬಿದ್ದು ಗಾಯವಾಗಿದೆ. ಗಾಯಗೊಂಡವರಿಗೆ ಕಾಪು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. 

Leave a Reply

Your email address will not be published. Required fields are marked *

error: Content is protected !!