ರಾಹುಲ್ ಹೇಳಿಕೆ ತಿರುಚಿ ಸುಳ್ಳು ಸುದ್ದಿ ಬಿತ್ತರಿಸಿದ ಟಿವಿ ನಿರೂಪಕ, ಬಿಜೆಪಿ ರಾಷ್ಟ್ರೀಯ ವಕ್ತಾರ ವಿರುದ್ಧ ಎಫ್‌ಐಆರ್

ಜೈಪುರ ಜು.3: ಕೇರಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉದಯ್‌ ಪುರದ ಹೇಳಿಕೆಯಂತೆ ತಿರುಚುವ ಮೂಲಕ ಸುಳ್ಳು ಸುದ್ದಿಯನ್ನು ಹರಡಿದ ಆರೋಪದ ಮೇಲೆ ಟಿವಿ ಸುದ್ದಿ ನಿರೂಪಕ, ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್ ರಾಥೋಡ್ ಮತ್ತು ಇತರರ ವಿರುದ್ಧ ಬಾನ್‌ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಚಾನೆಲ್ ಅನ್ನು ಟೀಕಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.

ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ರಾಮ್ ಸಿಂಗ್ ಅವರು ಅವರು ಬಾನ್‌ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೂ ಝೀ ನ್ಯೂಸ್‌ ನ ನಿರೂಪಕ ರೋಹಿತ್ ರಂಜನ್ ತಮ್ಮ ಶೋನಲ್ಲಿ ತಮ್ಮ ವಯನಾಡ್ ಕಚೇರಿಯಲ್ಲಿ ಎಸ್‌.ಎಫ್‌.ಐ ಕಾರ್ಯಕರ್ತರು ನಡೆಸಿದ ದಾಂಧಲೆಯ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಪ್ರಸಾರ ಮಾಡಿ, ಅದು ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಭೀಕರ ಹತ್ಯೆ ವಿಚಾರದಲ್ಲಿ ನೀಡಿದ ಹೇಳಿಕೆ ಎಂದು ತೋರುವಂತೆ ತಿರುಚಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮಾತ್ರವಲ್ಲದೆ ಗಾಂಧಿ ಹೇಳಿರುವುದು ವಯನಾಡಿನ ಯುವಕರಿಗಾಗಿಯೇ ಹೊರತು ಕನ್ಹಯ್ಯಾ ಲಾಲ್ ಹಂತಕರ ಕುರಿತಲ್ಲ ಎಂದು ಟಿವಿ ಚಾನೆಲ್‌ನ ಆಂಕರ್ ಮತ್ತು ಪ್ರವರ್ತಕರಿಗೆ ಸ್ಪಷ್ಟವಾಗಿ ತಿಳಿದಿತ್ತು” ಎಂದು ದೂರುದಾರರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಹಾಗೂ ಮಾಜಿ ಕೇಂದ್ರ ಸಚಿವ ರಾಥೋಡ್, ಮೇಜರ್ ಸುರೇಂದ್ರ ಪೂನಿಯಾ (ನಿವೃತ್ತ) ಮತ್ತು ಕಮಲೇಶ್ ಸೈನಿ ಜೊತೆಗೆ ಮಾಧ್ಯಮವೂ ಇದರಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 505 (ಅಪರಾಧ ಬೆದರಿಕೆ), 153 ಎ (ಧರ್ಮ, ಜನಾಂಗ, ಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ) ಮತ್ತು 120B ಅಡಿಯಲ್ಲಿ ಎಫ್‌.ಐ.ಆರ್ ದಾಖಲಿಸಲಾಗಿದೆ.

ಇನ್ನು ತಮ್ಮಿಂದಾದ ತಪ್ಪಿನ ಬಗ್ಗೆ  ಕ್ಷಮೆಯಾಚಿಸಿದ ಚಾನೆಲ್ ನ ತಂಡ “ನಿನ್ನೆ ನಮ್ಮ ಡಿ.ಎನ್‌.ಎ ಶೋನಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಉದಯ್‌ಪುರ ಘಟನೆಗೆ ತಳುಕು ಹಾಕುವ ಮೂಲಕ, ತಪ್ಪು ಸಂದರ್ಭದಲ್ಲಿ ವೀಡಿಯೊವನ್ನು ತೆಗೆದುಕೊಳ್ಳಲಾಗಿದೆ, ಇದು ಮಾನವ ಸಹಜ ದೋಷವಾಗಿದ್ದು, ನಮ್ಮ ತಂಡ ಕ್ಷಮೆಯಾಚಿಸುತ್ತದೆ” ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!