ಟೈಲರ್ ಹತ್ಯೆಯ ಪ್ರಕರಣ: ಆರೋಪಿಗಳು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ- ರಾಷ್ಟ್ರೀಯ ಮಾಧ್ಯಮವೊಂದರ ತನಿಖಾ ವರದಿ

ಉದಯಪುರ ಜು.2 : ಭಾರೀ ಸಂಚಲನ ಮೂಡಿಸಿದ ಉದಯಪುರ  ಟೈಲರ್ ಹತ್ಯೆಯ ಪ್ರಕರಣದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ ಹೊಂದಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದರ ತನಿಖಾ  ವರದಿಯಿಂದ ತಿಳಿದು ಬಂದಿದೆ.

ಮಾಧ್ಯಮ ವರದಿಯ ಪ್ರಕಾರ, ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಸದಸ್ಯ ಇರ್ಷಾದ್‌ ಚೈನ್‌ ವಾಲ ಆರೋಪಿಗಳಲ್ಲಿ ಓರ್ವನಾದ ರಿಯಾಝ್‌ ಜೊತೆ ಕಾಣಿಸಿಕೊಂಡಿರುವ ಹಲವು ಚಿತ್ರಗಳನ್ನು  ಬಿಡುಗಡೆ ಮಾಡಿದೆ. 

ಹಾಗೂ ಬಿಜೆಪಿಯ ಇನ್ನೋರ್ವ ಕಾರ್ಯಕರ್ತ ಮಹಮ್ಮದ್‌ ತಾಹಿರ್‌ ಎಂಬಾತನೊಂದಿಗೆ ರಿಯಾಝ್‌ ಇರುವ ಚಿತ್ರಗಳನ್ನೂ ಇಂಡಿಯಾ ಟುಡೆ ಬಹಿರಂಗ ಪಡಿಸಿದ್ದು, ತಾಹಿರ್‌ ಜೊತೆಗೆ ಉದಯಪುರದ ಬಿಜೆಪಿ ಕಾರ್ಯಕ್ರಮದಲ್ಲಿ ರಿಯಾಝ್‌ ಭಾಗಿಯಾಗಿದ್ದ. ಇರ್ಷಾದ್‌ ನೀಡಿರುವ ಹೇಳಿಕೆ ಪ್ರಕಾರ ರಿಯಾಝ್‌ ಹಾಗೂ ತಾಹೀರ್‌ ಆಪ್ತರಾಗಿದ್ದು, ಕೊಲೆಯ ಬಳಿಕ ತಾಹಿರ್‌ ನಾಪತ್ತೆಯಾಗಿದ್ದಾರೆ ಎಂದು  ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ಕುರಿತು ಇರ್ಷಾದ್‌ ಬಳಿ ಕೇಳಿದಾಗ, ಬಿಜೆಪಿ ನಾಯಕ ಗುಲಾಬ್‌ ಚಂದ್‌ ಕಟಾರಿಯಾ ಅವರ ಹಲವು ಕಾರ್ಯಕ್ರಮಗಳಲ್ಲಿ ಹತ್ಯೆಯ ಆರೋಪಿ ಭಾಗಿಯಾಗಿದ್ದ, ಆತ ಬಿಜೆಪಿ ಸೇರಲು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಿದ್ದ. ಆದರೆ ವೈಯಕ್ತಿಕವಾಗಿ ಬಿಜೆಪಿ ನೀತಿಯನ್ನು ಟೀಕಿಸುತ್ತಿದ್ದ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!