ಉಡುಪಿ: ಠಾಣಾಧಿಕಾರಿ ಅನಂತಪದ್ಮನಾಭ ಅಮಾನತು ಆದೇಶ ಹಿಂದೆಗೆತ
ಉಡುಪಿ: ನಗರ ಠಾಣಾಧಿಕಾರಿ ಅನಂತಪದ್ಮನಾಭ ಅಮಾನತು ಆದೇಶ ಹಿಂದೆಗೆತ. ವಾರದ ಹಿಂದೆ ಅಮಾನತುಗೊಂಡ ಇವರನ್ನು ಉಡುಪಿ ಎಸ್ಪಿ ಕಚೇರಿಯಲ್ಲಿ ಇರುವ ಡಿಸಿಆರ್‌ಬಿ ವಿಭಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.
ಉಡುಪಿ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನಂಬರ್ 2 ರಂದು ನೈತಿಕ ಪೊಲೀಸ್ ಗಿರಿಗೆ ಒಳಗಾಗಿದ್ದ ಅನ್ಯಕೋಮಿನ ಯುವಕರು ತಮಗಾದ ಅನ್ಯಾಯದ ವಿರುದ್ದ ಉಡುಪಿ ಎಸ್ಪಿ ನಿಶಾ ಜೇಮ್ಸ್ ಅವರಿಗೆ ದೂರಿದ್ದರು.
ಈ ಘಟನೆ ಅಯೋಧ್ಯ ತೀರ್ಪುನಿ ಸಂದರ್ಭ ಠಾಣೆಯಲ್ಲೇ ರಾಜಿ ಪಂಚಾಯಿತಿಕೆ ನಡೆಸಿ ಹಲ್ಲೆ ನಡೆಸಿದವರ ವಿರುದ್ದ ಯಾವುದೇ ದೂರು ದಾಖಲಿಸಿದೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪಕ್ಕೆ ಉಡುಪಿ ನಗರ ಠಾಣಾಧಿಕಾರಿ ಅನಂತಪದ್ಮನಾಭ ಮತ್ತು ಹೆಡೆ ಕಾನ್ಸ್ಟೆಬಲ್ ಜೀವನ್ರನ್ನು ಎಸ್ಪಿ ನಿಶಾ ಜೇಮ್ಸ್ ಅಮಾನತುಗೊಳಿಸಿ ಆದೇಶ ನೀಡಿದ್ದರು.
ಇವರ ಅಮಾನತು ಆದೇಶಕ್ಕೆ ಉಡುಪಿ ನಗರದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಿದ ಐಜಿಪಿ ಅವರು ಅನಂತ ಪದ್ಮನಾಭ
ಅವರನ್ನು ಉಡುಪಿ ಎಸ್ಪಿ ಕಚೇರಿಯಲ್ಲಿ ಡಿಸಿಆರ್‌ಬಿ (ಡಿಸ್ಟಿಕ್ ಕ್ರೈಂ ರೆಕೊರ್ಡ ಬ್ಯೂರೋ)ಗೆ ನಿಯುಕ್ತಿ ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.