ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗೋಪೂಜೆ

ಉಡುಪಿ: ಜಿಲ್ಲಾ ಬಿಜೆಪಿ ಮಹಿಳಾಮೋರ್ಚಾದ ವತಿಯಿಂದ ಬುಧವಾರ ಇಂದ್ರಾಳಿಯ ಜಲಜಾ ಆಚಾರ್ತಿ ಮನೆಯಲ್ಲಿ ಗೋಪೂಜಾ ಕಾರ್ಯಕ್ರಮ ನಡೆಯಿತು .

ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ನೇತೃತ್ವದಲ್ಲಿ ನಡೆದ ಗೋಪೂಜೆಯಲ್ಲಿ, ಗೋವುಗಳಿಗೆ ನವಧಾನ್ಯಗಳನ್ನು ನೀಡಿ, ಆರತಿ ಬೆಳಗಿ,ಗೋಪೂಜೆಯನ್ನು ನೆರವೇರಿಸಿದರು. ಗೋವು ಪಾಲಕರಿಗೆ ,ಗೋವುಗಳಿಗಾಗಿ ಪಶುಆಹಾರ ಮತ್ತು ಗೋಕಾಣಿಕೆಯನ್ನು ನೀಡಿ ಹೈನುಗಾರರಿಗೆ ಪ್ರೋತ್ಸಾಹಿಸಲಾಯಿತು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್, ಬಿ.ಜೆಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವೀಣಾ.ಎಸ್.ಶೆಟ್ಟಿ ಮತ್ತು ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಭಾರತಿ ಚಂದ್ರಶೇಖರ ,ಕಾರ್ಕಳ ಕ್ಷೇತ್ರದ ಮ.ಮೋರ್ಚಾ ಅಧ್ಯಕ್ಷೆ ಪ್ರಮೀಳಾ,ಉಡುಪಿ ಗ್ರಾಮಾಂತರ ದ ಅಧ್ಯಕ್ಷೆ, ವೀಣಾ ನಾಯಕ್,ಕಾಪು ಕ್ಷೇತ್ರ ಮ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಮಾ.ಯು.ಶೆಟ್ಟಿ, ಉಡುಪಿ,ನಗರ ಬಿ.ಜೆ.ಪಿ,ಮ.ಮೋರ್ಚಾದ ಅಧ್ಯಕ್ಷೆ, ರಜನಿ ಹೆಬ್ಬಾರ್, ಬಿ.ಜೆ.ಪಿಯ ಚುನಾಯಿತ ನಗರ ಸಭಾ ಸದಸ್ಯರುಗಳಾದ ಸುಮಿತ್ರ ನಾಯಕ , ಕಲ್ಪನ ಸುಧಾಮ ಉಪಸ್ಥಿತರಿದ್ದರು.

1 thought on “ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗೋಪೂಜೆ

Leave a Reply

Your email address will not be published. Required fields are marked *

error: Content is protected !!