ಉಡುಪಿ ಜಿಲ್ಲಾ ಬಿಜೆಪಿ ಯೋಗ ದಿನಾಚರಣೆ
ಉಡುಪಿ :ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕಿದಿರು ಹೋಟೆಲ್‌ನ ಶೇಷಶಯನ ಸಭಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.
ಸಭಾ ಕಾರ್ಯಕ್ರಮನ್ನುಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ವಿಪಕ್ಷನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಾಚೀನ ಕಾಲದಿಂದಲೂ ಭಾರತವು ಯೋಗವನ್ನು ರಾಷ್ಟ್ರಕ್ಕೆ ಪರಿಚಯಿಸಿತ್ತು .
ಭಾರತವು ಯೋಗದಿಂದ ಮನುಷ್ಯನ ಆರೋಗ್ಯವಂತನಾಗಿ ಬದುಕಲು ಸಾಧ್ಯವಾಗಿದೆ ಎನ್ನುವಂತದ್ದು ವಿಶ್ವವ್ಯಾಪಿ ತೋರಿಸಿಕೊಟ್ಟಿದೆ.ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಭಾರತದ ಪ್ರಧಾನಿಯಾದ ನರೇಂದ್ರಮೋದಿಯವರು ದೇಶದ ಜನತೆಗೆ ಜೂನ್ 21 ಯೋಗ ದಿನಾಚರಣೆಯನ್ನಾಗಿ ಘೋಷಿಸಿದರು.
ಸದೃಢ ಭಾರತ ನಿರ್ಮಾಣ ವಾಗುವ ಕನಸನ್ನು ಹೊತ್ತು ಅದನ್ನು ಯಶಸ್ವಿಯಾಗಿ ಮಾಡಲು ಈ ದಿಟ್ಟ ಹೆಜ್ಜೆ ರಾಷ್ಟ್ರಕ್ಕೆ ಮಾದರಿಯಾಗಿದೆಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ .ಶೆಟ್ಟಿ ಪೂರ್ಣಿಮಾ ಸುರೇಶ, ಕುತ್ಯಾರು ನವೀನ್ ಶೆಟ್ಟಿ ಯೋಗ ಶಿಕ್ಷಕಿಯರಾದ ಮಮತಾ ಶೆಟ್ಟಿಗಾರ್, ಮಲ್ಲಿಕಾ ಶಿಬಿರಾರ್ಥಿಗಳಿಗೆ ಯೋಗವನ್ನು ಕಲಿಸಿಕೊಟ್ಟರು.