ಉಡುಪಿ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ : ಇಬ್ಬರ ಬಂಧನ

ಉಡುಪಿ : ಕಳೆದ ಎರಡು ದಿನಗಳ ಹಿಂದೆ ಕುಕ್ಕಿಕಟ್ಟೆ ಇಂದಿರಾನಗರದ ಮನೆಯೊಂದರಲ್ಲಿ ಕಳ್ಳತನ ನಡೆಸಿದ ಆರೋಪಿಗಳಿಬ್ಬರನ್ನು ಉಡುಪಿ ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇಂದಿರಾನಗರದ ವಲ್ಲಿ ಎಂಬವರು ಜುಲೈ 16 ರಂದು ತಮ್ಮ ಸಂಬಂಧಿಕರ ಮನೆಗೆ ಹೋದ ಸಮಯದಲ್ಲಿ , ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಸ್ಥಳೀಯರಾದ ಫಾರೂಕ್(18) ಮತ್ತು ಅಫ್ಜಲ್ (19) ಮನೆಯ ಮಹಡಿಯ ಹಂಚು ತೆಗೆದು ಮನೆಯೊಳಗಿದ್ದ ಕಪಾಟಿನಲ್ಲಿದ್ದ ಎರಡು ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದು ಐದು ಸಾವಿರ ಕಳವುಗೈದಿರುತ್ತಾರೆ.

 

ಈ ಬಗ್ಗೆ ಮನೆಯ ಮಾಲಕಿ ವಲ್ಲಿ ಉಡುಪಿ ನಗರ ಠಾಣೆಗೆ ಚಿನ್ನಾಭರಣ ಕಳವಾದ ದೂರು ನೀಡಿದ್ದರು .ಇಂದಿರಾನಗರದ 8 ನೇ ಕ್ರಾಸ್‌ನಲ್ಲಿ ಪಾಳುಬಿದ್ದ ಮನೆಯೊಂದರಲ್ಲಿ ಹತ್ತಾರು ಯುವಕರು ಗಾಂಜಾ ಸೇವನೆ ಮಾಡುತ್ತಿರುವ ಮಾಹಿತಿ ಪಡೆದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮನೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಫಾರೂಕ್ ಹೊಸನಗರ ನಿವಾಸಿಯಾಗಿದ್ದು ಇಂದಿರಾನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾನೆ.

ಉಡುಪಿ ನಗರ ಠಾಣಾಧಿಕಾರಿ ಅನಂತ ಪದ್ಮಾನಾಭ ಅವರ ನೇತೃತ್ವದ ಪೊಲೀಸರ ಕ್ಷೀಪ್ರ ಕಾರ್ಯಚರಣೆಯಲ್ಲಿ
ಸಿಬ್ಬಂದಿಗಳಾದ ಗೋಪಾಲಕೃಷ್ಣ ಜೋಗಿ,ಜೀವನ್,ಇಮ್ರಾನ್,ಸಂಗನಗೌಡ,ಸಂತೋಷ ರಾಥೋಡ್,ದ್ಯಾಮನ ಗೌಡ,ಕಿರಣ್ ಆರೋಪಿಗಳ ಪತ್ತೆಗೆ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!