ಮಂಗಳೂರಿನಲ್ಲಿ ಹೈ- ಅಲರ್ಟ್ ದ.ಕ  ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ 

ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ನಾಳೆಯಿಂದ 3 ದಿನಗಳವರೆಗೆ ವಿಪರೀತ ಮಳೆ ಆಗುವ ಸಾಧ್ಯತೆ ಇದೆ ಈ ಹಿನ್ನೆಲೆಯಲ್ಲಿ ಶನಿವಾರ ಎಲ್ಲಾಶಾಲಾ ಕಾಲೇಜುಗಳಿಗೆ ರಾಜ ಘೋಷಿಸಲಾಗಿದೆ.

ಸಾರ್ವಜನಿಕರು ನೀರು ತುಂಬುವ ತಗ್ಗು ಪ್ರದೇಶ ಕೆರೆ, ನದಿತೀರ ,ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಎಚ್ಚರಿಕೆ ವಹಿಸಬೇಕು , ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು ಪ್ರವಾಸಿಗರು ಸಾರ್ವಜನಿಕರು ನದಿ ಹಾಗು ಸಮುದ್ರ ತೀರಕ್ಕೆ ತೆರಳದಂತೆ  ಎಚ್ಚರಿಕೆ ನೀಡಲಾಗಿದೆ.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟ ಯಾವುದೇ ದೂರುಗಳಿದ್ದರೆ ತುರ್ತು ಸೇವೆ 1077 ಗೆ ವಾಟ್ಸ್ ಅಪ್ ನಂಬರ್  9483908000  ಕರೆ ಮಾಡಬಹುದು ಎಂದು ಮಂಗಳೂರು ಜಿಲ್ಲಾಧಿಕಾರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!