ವೈಭವದ ಪುತ್ತಿಗೆ ಪರ್ಯಾಯ ಮೆರವಣಿಗೆ ಸಂಪನ್ನ
ಎಲ್ಲಿ ನೋಡಿದರಲ್ಲಿ ಜಗಮಗಿಸುವ ವಿದ್ಯುತ್ ಈ ದೀಪಾಲಂಕಾರ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವ ಹೂವಿನ ಅಲಂಕಾರದ ಸೊಬಗು. ಕಣ್ಣಹಿಸಿದಷ್ಟು ಅನೇಕ ಮುಖವಾಡಗಳನ್ನು ಧರಿಸಿದ ಕಲಾವಿದರು. ದೂರದಲ್ಲಿ ನಿಂತು ಈ ವೈಭೋಗವನ್ನು ನೋಡಲು ಕಾಯುತ್ತಿರುವ ಭಕ್ತ ಸಮೂಹ. ಭಾಗಶಃ ನಿನ್ನೆ ದಿನ ಉಡುಪಿ ವೈಕುಂಠ ವಾಗಿ ಮಾರ್ಪಟ್ಟಿತ್ತು ಎಂದರು ತಪ್ಪಾಗಲಾರದು.
ಶ್ರೀ ಸುಗುಣೀಂದ್ರ ತೀರ್ಥರ ಚತುರ್ಥ ಪರ್ಯಾಯದ ಸಂದರ್ಭದಲ್ಲಿ ರಾತ್ರಿ ಸುಮಾರು 3 ಗಂಟೆಯಿಂದ ಬೆಳಗಿನ ಜಾವ 5:30ವರೆಗೆ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.
ಅನೇಕ ಪುರಾಣ ಕಥೆಗಳನ್ನ ಸಾರುವ ಸ್ತಬ್ಧ ಚಿತ್ರಗಳು ಚಂಡೆ ಬಳಗ ಭಜನಾ ತಂಡಗಳು, ಕೋಲಾಟ ಅನೇಕ ಮುಖವಾದ್ಯಗಳ ಅನುಧರಿಸಿದ ಕಲಾವಿದರು. ಹೀಗೆ ಉಡುಪಿಯ ರಾಜ ರಸ್ತೆಗಳು ಸಾಂಸ್ಕೃತಿಕ ವೈಭವದಿಂದ ತುಂಬಿ ತುಳುಕಿತ್ತು.
ಉಡುಪಿಯ ಬೀದಿಯಲ್ಲಿ ಆರ್ಕೆಸ್ಟ್ರಾ ಸಂಗೀತ ರಸಮಂಜರಿ ಕಾರ್ಯಕ್ರಮ ಜನರನ್ನ ಸಂಗೀತ ಲೋಕ ಸೃಷ್ಟಿಸಿದರೆ, ಕೃಷ್ಣ ಮಠದೊಳಗೆ ಹಾಗೂ ರಥ ಬೀದಿಯಲ್ಲಿ ಪರ್ಯಾಯದ ಧಾರ್ಮಿಕ ವಿಧಿ ವಿಧಾನಗಳು ಜನರನ್ನ ಭಕ್ತಿ ಲೋಕದಲ್ಲಿ ತೇಲೀಸುತ್ತಿತ್ತು.
ಮೇನೆಯಲ್ಲಿ ರಾರಾಜಿಸಿದ ಪುತ್ತಿಗೆಶ್ರೀ: ಜನರ ಹರ್ಷೋದ್ಗಾರದ ನಡುವೆ ಕಾಪುವಿನ ದಂಡ ತೀರ್ಥದಿಂದ ಪುತ್ತಿಗೆ ಶ್ರೀಗಳು ಉಡುಪಿಯತ್ತ ಬಂದು ಉಡುಪಿಯಿಂದ ಮೇನೆಯ ಮೂಲಕ ಹಿರಿಯ ಹಾಗೂ ಕಿರಿಯ ಶ್ರೀಗಳು ಕೃಷ್ಣ ಮಠದತ್ತ ಪಯಣಿಸಿದ ಸೊಬಗು ಎಲ್ಲರ ಕಣ್ಮನ ಸೆಳೆಯಿತು.
ಹಸ್ತಾಂತರಗೊಂಡ ಅಕ್ಷಯ ಪಾತ್ರೆ ಹಾಗೂ ಸೌಟು: ಸದ್ದು ಗದ್ದಲವಿಲ್ಲದೆ ಕೃಷ್ಣಾಪುರದ ಮಠಾಧೀಶರು ಎರಡು ವರ್ಷಗಳ ಕಾಲ ಪರ್ಯಾಯವನ್ನ ಪೂರೈಸಿ, ಇದೀಗ ಪುತ್ತಿಗೆಶ್ರೀಗಳಿಗೆ ಅಕ್ಷಯ ಪಾತ್ರೆ ಹಾಗೂ ಸೌಟನ್ನು ಅದಮಾರು ಹಿರಿಯ ಯತಿಗಳಾದ ಶ್ರೀ ವಿಶ್ವ ಪ್ರಿಯ ತೀರ್ಥರಿಂದ ಹಸ್ತಾಂತರಗೊಂಡಿತು. ನಂತರ ರಾಜಾಂಗಣದಲ್ಲಿ ನಡೆದ ದರ್ಬಾರನ ಪುತ್ತಿಗೆಯ ಹಿರಿಯ ಹಾಗೂ ಕಿರಿಯ ಶ್ರೀಗಳು ನಡೆಸಿಕೊಟ್ಟರು.