ಉದ್ಯಾವರದ ಡಿಜಿಟಲ್ ಸೇವಾ ಕೇಂದ್ರ ರಾಜ್ಯದಲ್ಲಿ ಪ್ರಥಮ ಸ್ಥಾನ

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ”ಡಿಜಿಟಲ್ ಸೇವಾ ಸಿಂಧು ಕೇಂದ್ರ ” ಉತ್ತಮ ನಿರ್ವಹಣೆಗಾಗಿ ಉದ್ಯಾವರದ ಡಿಜಿಟಲ್ ಸೇವಾ ಕೇಂದ್ರ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ.

 ರಾಜ್ಯ ಸರ್ಕಾರವು ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅರ್ಜಿ ಸ್ವೀಕರಿಸುವ ೮೦೦೦ ಕೇಂದ್ರವನ್ನು  ತೆರೆದಿತ್ತು. ಸರಕಾರ ವಿವಿಧ ಯೋಜನೆಗಳ ಸವಲತ್ತುಗಳನ್ನು ಶ್ರೀಘ್ರ ಪಡೆಯಲು ಹಾಗೂ ಜಾತಿ, ಆದಾಯ ಸರ್ಟಿಫಿಕೇಟ್, ಹಿರಿಯ ನಾಗರಿಕರ ಚೀಟಿ, ಆಯುಷ್ಮಾನ್ ಭಾರತ ಆರೋಗ್ಯ  ಕಾರ್ಡ್,ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳು ಈ ಕೇಂದ್ರ ದಲ್ಲಿ ದೊರೆಯುತ್ತದೆ.

ಉತ್ತಮ ಸೇವೆ ಒದಗಿಸುವ ಸಲುವಾಗಿ 134 ಸೇವೆಗಳನ್ನು ಡಿಜಿಟಲೀಕರಣ ಮಾಡಿ ಸಾರ್ವಜನಿಕರಿಗೆ ತಕ್ಷಣದಿಂದಲೇ ಸಿಗುವಂತೆ ಮಾಡಿರುವ  ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಉದ್ಯಾವರದ ಕೇಂದ್ರ ವನ್ನು ಎರಡೂವರೆ ವರ್ಷದಿಂದ ಮಹಿಳೆಯೋರ್ವಳು ನಡೆಸಿಕೊಂಡು ಬರುತ್ತಿದ್ದಾರೆ. 

ಡಿಜಿಟಲ್ ಸೇವಾ ಕೇಂದ್ರ ಉಡುಪಿ ಜಿಲ್ಲೆಯಲ್ಲಿ ಸುಮಾರು 27000 ಅರ್ಜಿಗಳುಸ್ವೀಕಾರವಾಗಿದೆ. ಉದ್ಯಾವರದ ಸೌಮ್ಯಶ್ರೀ ನಡೆಸಿಕೊಂಡು ಬರುತ್ತಿರುವ ಕೇಂದ್ರದಲ್ಲಿ 13000 ಅರ್ಜಿಯನ್ನು ಸ್ವೀಕರಿಸಿ ರಾಜ್ಯದಲ್ಲಿಯೇ ಉತ್ತಮ ಸೇವಾ ಕೇಂದ್ರ ಎನ್ನುವ‌ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಇವರಿಗೆ ಉತ್ತಮ ಸೇವಾಕೇಂದ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *

error: Content is protected !!