ಯು. ಶ್ರೀಧರ್‌ರವರು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿ ಯು. ಶ್ರೀಧರ್ ಅವರ 80ನೇ ಜನ್ಮದಿನಾಚರಣೆ, ವೈವಾಹಿಕ ಸುವರ್ಣ ಸಂಭ್ರಮ ಮತ್ತು ಅವರು ರಚಿಸಿದ ಎರಡು ಪುಸ್ತಕಗಳ ಬಿಡುಗಡೆ ಜೂನ್ 30ರಂದು ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಪಿ.ವಿ. ಭಂಡಾರಿಯವರು ಯು. ಶ್ರೀಧರರು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮ ಭಕ್ತ ಅವರ ಕುರಿತು ಪುಸ್ತಕ ಬರೆದಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ನಾರಾಯಣ ಗುರುಗಳ ಉಪದೇಶವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ ಸಾತ್ವಿಕ ವ್ಯಕ್ತಿ ಎಂದು ಪ್ರಶಂಸಿಸಿದರು.

ಯು. ಶ್ರೀಧರ್ ಅವರು ಬರೆದ “ಬ್ರಹ್ಮಶ್ರೀ ನಾರಾಯಣಗುರು” ಪುಸ್ತಕದ ಇಂಗ್ಲೀಷ್ ಆವರ್ತಿಯನ್ನು ಹೈಟೆಕ್ ಆಸ್ಪತ್ರೆಯ ಡಾ. ಟಿ.ಎಸ್. ರಾವ್ ಮತ್ತು “ಸಾವಿರಾರು ನೆನಪುಗಳು – ಬಾಳ ಮುಸ್ಸಂಜೆಯಲ್ಲಿ” ಪುಸ್ತಕವನ್ನು ಮಾಜಿ ಶಾಸಕರಾದ ಶ್ರೀ ಯು. ಆರ್. ಸಭಾಪತಿಯವರು ಅನಾವರಣ ಮಾಡಿದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಕೇಂದ್ರ ಉಡುಪಿ ಇದರ ಗುರುಗಳಾದ ಶ್ರೀ ಬನ್ನಂಜೆ ಸಂಜೀವ ಸುವರ್ಣ, ಸಮಾಜಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲಪಾಡಿ ಮತ್ತು ಗಿನ್ನೆಸ್ ದಾಖಲೆಯ ಯೋಗಪಟು ಕುಮಾರಿ ತನುಶ್ರಿ ಯವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿಯವರಾದ ಶ್ರೀ ಮುರಲಿ ಕಡೆಕಾರ್, ಎ.ವಿ. ಬಾಳಿಗಾ ಅಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಾನಕಿ ಬ್ರಹ್ಮಾವರ, ಶ್ರೀ ದೇವಪ್ಪ ಬಿ. ಪೂಜಾರಿ ಮತ್ತಿತರರು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!