ಲೀಸ್ಗೆ ಪಡೆದ ಕಾರುಗಳನ್ನು ಓಲೆಕ್ಸ್ನಲ್ಲಿ ಮಾರಾಟಕ್ಕೆ ಯತ್ನ ಇಬ್ಬರ ಬಂಧನ, 5 ಕಾರು ವಶ
ಉಡುಪಿ : ಲೀಸ್ಗೆ ಕೊಟ್ಟ ಕಾರುಗಳನ್ನು ಓಲೆಕ್ಸ್ನಲ್ಲಿ ಮಾರಾಟಕ್ಕೆ ಇದೆ ಎಂದು ಜಾಹೀರಾತು ಹಾಕಿ ಮೋಸ ಮಾಡುತ್ತಿದ್ದ ಇಬ್ಬರ ಬಂಧನ . ಪ್ರಮುಖ ಆರೋಪಿ ಬಂಧನಕ್ಕೆ ಬಲೆ ಬೀಸಿದ ಬ್ರಹ್ಮಾವರ ಪೊಲೀಸರು.
ಬಂಧಿತ ಆರೋಪಿಗಳು ಬಜಾಲ್ ಅಬ್ದುಲ್ಲ ಯಾನೆ ಅಬ್ಬಾಸ್ (33 ) ವಿಟ್ಲ ಮಹಮ್ಮದ್ ಸಫಾನ್ (27 ) ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ
ಬಂಧಿತರಿಂದ ಸ್ಕಾರ್ಪಿಯೋ ಕಾರು, ಮಹೀಂದ್ರ ಕಾರು, ಐ20 ಕಾರು ಮಹೀಂದ್ರ ಕಾರು , ಬ್ರೀಜಾ ಕಾರು ವಶಪಡಿಸಿಕೊಂಡಿದ್ದು, ವಾಹನಗಳ ಒಟ್ಟು ಮೌಲ್ಯ ರೂಪಾಯಿ 39,00,000/- ರೂಪಾಯಿ. ಆರೋಪಿಗಳು ಲೀಸ್ಗೆ ಪಡೆದುಕೊಳ್ಳುವ ಕಾರನ್ನು ಎರಡು ತಿಂಗಳು ಬಾಡಿಗೆಗೆ ಪಡೆದು ಮಾಲಕನಿಗೆ ಹಣ ನೀಡಿ ನಂಬಿಸಿ, ನಂತರ ಹೊರ ರಾಜ್ಯಗಳಿಗೆ ಹೋಗಿ ಅದನ್ನು ಮಾರಾಟ ಮಾಡುತ್ತಾರೆ. ಇವರ ಜಾಲಕ್ಕೆ ಮೋಸ ಹೋಗಿದ್ದ ಬ್ರಹ್ಮಾವರ ಹೊಸೂರು ನಿವಾಸಿ ಸುನೀಲ್ ಜುಲೈ 24 ರಂದು ತನಗಾದ ಮೋಸದ ಬಗ್ಗೆ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪಿ.ಎಸ್.ಐ ರಾಘವೇಂದ್ರ
ಆರೋಪಿಗಳಾದ ಅಬ್ದುಲ್ಲ @ ಅಬ್ಬಾಸ್ ಹಾಗೂ ಮಹಮ್ಮದ್ ಸಫಾನ್ರವರನ್ನು ಬಂಧಿಸಿದ್ದು ಆರೋಪಿಗಳು ಸುನಿಲ್ನ ಕಾರನ್ನು ಬಳ್ಳಾರಿಯ ಶಿವಕುಮಾರ ಎಂಬವರಿಗೆ ಮಾರಾಟ ಮಾಡಿರುತ್ತಾರೆ.
ಮಂಗಳೂರಿನ ಇಬ್ರಾಹಿಂ ಇದರ ಪ್ರಮುಖ ಆರೋಪಿ ೬೦ಕ್ಕೂ ಹೆಚ್ಚು ಕಾರುಗಳನ್ನು ಈ ರೀತಿ ಮೋಸ ಮಾಡಿ ಮಾರಾಟ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಲೀಸ್ಗೆ ಕಾರು ನಮಗೆ ಬೇಕು ಎಂದು ಹೇಳಿ ಮುಂಗಡ ಹಣ ಕೊಟ್ಟು ಖರೀದಿಸಿ ಅವರನ್ನು ನಂಬಿಸಲು ಕರಾರು ಪತ್ರ ಮಾಡಿ ಕಾರುಗಳನ್ನು ನಂತರ ದೂರದ ಊರಿಗೆ ತೆಗೆದುಕೊಂಡು ಹೋಗಿ ಕಾರು ನಮ್ಮದೇ ಎಂದು ಆರ್.ಸಿ.ಯಲ್ಲಿ ಹೆಸರು ಬದಲಾವಣೆ ಆಗಲು ಬಾಕಿ ಎಂದು ಹೇಳಿ ನಂಬಿಸಿ ಮಾರಾಟ ಮಾಡಿ ಕಾರು ಕೊಟ್ಟು ಅಡ್ವಾನ್ಸ್ ಹಣ ತೆಗೆದುಕೊಂಡು ಮೋಸ ಮಾಡುತ್ತಿದ್ದ ಖದೀಮರು.
ಆರೋಪಿಗಳ ಪೈಕಿ ಅಬ್ದುಲ್ಲ @ ಅಬ್ಬಾಸ್ ಎಂಬಾತನು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಹಾಗೂ ಬಜ್ಪೆಯಲ್ಲಿ ಕೊಲೆಗೆ ಯತ್ನ ಪ್ರಕರಣದ ಆರೋಪಿ.
ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಕಾಂತ ಕೆ. ರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪಿ.ಎಸ್.ಐ ರಾಘವೇಂದ್ರ ತಂಡ ನಡೆಸಿದ ಕಾರ್ಯಚರಣೆಯಲ್ಲಿ ಭಾಗವಹಿಸಿದೆ.