ಬ್ರಹ್ಮಾವರ :ಲಿಫ್ಟ್ ಕೊಡುವುದಾಗಿ ಅಸಹಾಯಕ ಮಹಿಳೆಯ ಅತ್ಯಾಚಾರಕ್ಕೆ ಯತ್ನ

ಬ್ರಹ್ಮಾವರ -(ಉಡುಪಿ ಟೈಮ್ಸ್ ವರದಿ )- ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಂದರ್ಭ ಅತ್ಯಾಚಾರ ಯತ್ನವಾಗಿದ್ದು, ಜಗತ್ತು ಕರೋನ ಭೀತಿಯಲಿದ್ದಾರೆ ಇಲ್ಲೊಬ್ಬ ನೀಚ ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮೇ 1ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ಕೆಲಸ ಮುಗಿಸಿ ಮನೆಗೆ ತೆರಳುವಾಗ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿ ಬೈಕ್ ನಲ್ಲಿ ಡ್ರಾಪ್ ನೀಡುವುದಾಗಿ ತಿಳಿಸಿ, ನಂಬಿಸಿ ಕರೆದೋಯ್ಯಿದಿದ್ದ.

ಬ್ರಹ್ಮಾವರದಿಂದ ಉಡುಪಿ ಸಂತೆಕಟ್ಟೆಗೆ ಬಿಡುವಂತೆ ತಿಳಿಸಿದ್ದ ಮಹಿಳೆ, ದಿನಸಿ ಕಿಟ್ ಹಿಡಿದು ಆರೋಪಿಯ ಮೋಟಾರ್ ಸೈಕಲ್ ನ ಹಿಂಬದಿ ಕುಳಿತು ತೆರಳಿದ್ದಳು. ಮಧ್ಯ ದಾರಿಯಲ್ಲೆ ಆರೋಪಿ ಬೇರೆ ದಾರಿಯಲ್ಲಿ ಸ್ಪೀಡ್ ಆಗಿ ಬೈಕ್ ಚಲಾಯಿಸಿ ಹಾಡಿಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಮಹಿಳೆ ಕಿರುಚಿ ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದ ಆರೋಪಿ. ಕೊಲೆ ಮಾಡಲು ಕಲ್ಲು ಹೆಕ್ಕಲು ಹೋದ ಸಂದರ್ಭ ತಪ್ಪಿಸಿಕೊಂಡ ಮಹಿಳೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಬ್ರಹ್ಮಾವರ ಪೊಲೀಸ್ ರಿಂದ ತೀವ್ರ ಶೋಧ ನಡೆಸುತ್ತಿದ್ದಾರೆ .

Leave a Reply

Your email address will not be published. Required fields are marked *

error: Content is protected !!