ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ರೋಶನ್
ಉಡುಪಿ: ಕಳೆದ ಬುಧವಾರ ಕೊರಂಗ್ರಪಾಡಿ ಜಂಕ್ಷನ್ ಬಳಿ ಶಾಲೆಗೆಂದು ಮಗನನ್ನು ಕರೆದುಕೊಂಡು ಹೋಗುತ್ತಿದ್ದಾಗ ಬಸ್ ಮತ್ತು ರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಎಂ ಇ ಟಿ ಶಾಲಾ ವಿದ್ಯಾರ್ಥಿ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾನೆ.
ಬುಡ್ನಾರು ನಿವಾಸಿ ರಿಯಾಜ್ ಕಳೆದ ಬುಧವಾರ ತನ್ನ ರಿಕ್ಷಾ ದಲ್ಲಿ ಮಗನ್ನು ವಿಶೇಷ ತರಗತಿಯಗೆ ಎಮ್ಇ ಟಿ ಉದ್ಯಾವರ ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭ ಬೆಳಿಗ್ಗೆ ಎಂಟು ಹತ್ತರ ಸುಮಾರಿಗೆ ಉಡುಪಿಯಿಂದ ಕಾರ್ಕಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಎಸ್ ವಿ ಟಿ ಗೆ ಡಿಕ್ಕಿ ಹೊಡೆದಾಗ ಬಾಲಕ ರೋಶನ್ (15) ಎರಡು ವಾಹನಗಳ ನಡುವೆ ಸಿಲುಕಿ ಗಂಭೀರ ಗಾಯಗೊಂಡಿದ್ದ.
ತಕ್ಷಣ ಸ್ಥಳೀಯರು ಬಾಲಕನನ್ನು ಬಸ್ ಮತ್ತು ರಿಕ್ಷಾ ನಡುವಿನಿಂದ ಹೊರ ತೆಗೆದು ಆಸ್ಪತ್ರೆ ಗೆ ದಾಖಲಿಸಿದ್ದರು. ಆದರೆ ಇಂದು ಮುಂಜಾನೆ ಬಾಲಕ ಚಿಕಿತ್ಸೆ ಗೆ ಸ್ಪಂದಿಸದೆ ಕೊನೆಯುಸಿರು ಎಳೆದಿದ್ದಾನೆ.ಮ್ರತನ ನಿಧನದ ಸ್ಮರಣಾರ್ಥ ಗುಡ್ಡೆಯಂಗಡಿಯ ಎಂ ಇ ಟಿ ಶಾಲೆಗೆ ಇಂದು ರಜೆ ನೀಡಲಾಗಿದೆ