ಅಜ್ಜರಕಾಡು : ಭಾರಿ ಮಳೆ ಗಾಳಿಗೆ ಹತ್ತಕ್ಕೂ ಹೆಚ್ಚು ಮರ, ವಿದ್ಯುತ್ ಕಂಬ ಉರುಳಿ ಬಿದ್ದು ಅಪಾರ ನಷ್ಟ
ಉಡುಪಿ: ಇಂದು ಎಡೇಬಿಡದೇ ಸುರಿಯುತ್ತಿರುವ ಗಾಳಿ ಮಳೆಯ ಪರಿಣಾಮವಾಗಿ ಅಜ್ಜರಕಾಡು ಎಲ್ಐಸಿ ಪಕ್ಕದ ರಸ್ತೆ ಬಳಿ 4 ಕ್ಕೂ ಹೆಚ್ಚು ಮರ ಧರೆಗುರುಳಿದೆ, 10 ವಿದ್ಯುತ್ ಕಂಬ ಉರುಳಿಬಿದ್ದ ಪರಿಣಾಮ 4 ಅಂಗಡಿಗಳು ಮತ್ತು ನಿಲ್ಲಿಸಿದ್ದ 1 ಮಿನಿ ಬಸ್ ಜಖಂಗೊಂಡಿದೆ.
ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಆಗಬಹುದಾದ ದೊಡ್ಡ ಅನಾಹುತ ತಪ್ಪಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ, ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ಇನ್ನೂ ಭಾರಿ ಮಳೆಗೆ ಉಡುಪಿಯ ಮುಕುಂದ ಕೃಪಾ ಶಾಲೆಯ ಆವರಣದಲ್ಲೂ ಮರವೊಂದು ಉರುಳಿಬಿದ್ದಿದೆ, ಕುಕ್ಕಿಕಟ್ಟೆಯ ಸೈಕಲ್ ಅಂಗಡಿಯ ಮೇಲ್ಛಾವಣೀ ಹಾರಿಹೋಗಿದೆ. ಉರುಳಿ ಬಿದ್ದ ಮರಗಳನ್ನು ತೆರವು ಗೊಳಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿಗಳು ಇನ್ನು ಸ್ಥಳಕ್ಕೆ ಬಾರದ ಕಂದಾಯ ಇಲಾಖೆಯ ಅಧಿಕಾರಿಗಳು .
ಉಡುಪಿ ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿಗೆ ಹೋರಾಟ ನೇತ್ರವತಿ ಏಕ್ಸ್ ಪ್ರೆಸ್ ರೈಲಿನ ಮೇಲೆ ಮರಬಿದ್ದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತು.