ಭಾರಿ ಗಾಳಿ ಮಳೆಗೆ ಶಿರ್ವ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹಾರಿ ವಿದ್ಯಾರ್ಥಿಗಳು ಪವಾಡ ಸದೃಶ್ಯ ಪಾರು

ಇಂದು ಸುರಿದ ಭಾರಿ ಗಾಳಿ,ಮಳೆಗೆ ಶಿರ್ವ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ 150 ಕ್ಕೂ ಹೆಚ್ಚು ಹಂಚುಗಳು ಹಾರಿ ಹೋಗಿದೆ.ಶಾಲೆಯ ತರಗತಿಗಳನ್ನು ಎಂದಿನಂತೆ ನಡೆಸುತ್ತಿದ್ದು ಅಂಗನವಾಡಿಗಳು ಕೂಡ ತೆರೆದಿದ್ದು ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶಿರ್ವ ಗ್ರಾಮ ಪಂಚಯತ್ ಗ್ರಾಮಕರಣಿಕ ವಿಜಯ್, ಸದಸ್ಯ ಕೆ.ಆರ್. ಪಾಟ್ಕರ್ ,ರಾಜೇಶ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್ ಶೆಟ್ಟಿ ಅನಾಹುತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!