ಗೋ ಹತ್ಯೆ ತಡೆಯಲು ತಲಾವಾರು ಹಿಡಿಯಲು ಸಿದ್ದ: ಶರಣ್
ಇಸ್ಲಾಂನಲ್ಲಿ ಎಲ್ಲೂ ಹೇಳದ ಗೋವು ಹತ್ಯೆ ಬಲಿಯನ್ನು ಯಾಕೆ ಮಾಡುತ್ತೀರಿ, ಬಕ್ರಿದ್ ಹಬ್ಬದ ನೆಪದಲ್ಲಿ ಗೋವುಗಳ ಹತ್ಯೆ, ಹಿಂಸಿಸುವುದು,ಕಳ್ಳತನ ಮಾಡಿದರೆ ನಾವು ಸುಮ್ಮನಿರಲ್ಲ ,ನಮ್ಮ ಸಂಘಟನೆಯ ಎಲ್ಲ ಕೇಂದ್ರದಲ್ಲಿ 100 ರಷ್ಟು ಕಾರ್ಯಕರ್ತರಿದ್ದಾರೆ, ನೀವು ಮಾರಕಾಸ್ತ್ರ ಹಿಡಿದು ಗೋವು ಕಳ್ಳತನ ಮಾಡಿದರೆ ನಾವೂ ಕೂಡ ಅದೇ ಮಾರ್ಗದಲ್ಲಿ ತಡೆಯಲು ಮುನ್ನುಗ್ಗುತ್ತೇವೆಂದು ಭಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಅಕ್ರಮ ಗೋಸಾಗಟ ವಿರುದ್ಧ ತಾಲೂಕ್ ಕಛೇರಿ ಮುಂಭಾಗ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಭಜರಂಗದಳ ಹಾಗೂ ಹಿಂದು ಜಾಗರಣವೇದಿಕೆ ಜಂಟಿಯಾಗಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ಏಕಕಾಲದಲ್ಲಿ ಅಕ್ರಮ ಗೋಸಾಗಟದ ವಿರುದ್ಧ ಪ್ರತಿಭಟನೆ ಸಭೆ ನಡೆಸಿಯಿತು.
ಗೋಕಳ್ಳತನ ತಡೆಯಲು ಹೋದ ಕಾರ್ಯಕರ್ತರ ಮೇಲೆ ಬೇಕಾಬಿಟ್ಟಿ ಕೇಸುಗಳನ್ನು ಹಾಕಲಾಗುತ್ತಿದೆ, ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಅಕ್ರಮ ಗೋಸಾಗಟದ ವಿಚಾರದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಮ್ರದು ಧೋರಣೆ ತೋರಿಸುತ್ತಿದೆ, ಕರಾವಳಿಯ ಅವಳಿ ಜಿಲ್ಲೆಯಲ್ಲಿ ಇದರ ವಿರುದ್ಧ ಸರಕಾರಕ್ಕೆ ,ಜನಪ್ರತಿನಿದಿಗಳಿಗೆ ಮನವಿಗಳನ್ನು ನೀಡಿದರೂ ಅಕ್ರಮವಾಗಿ ಹಟ್ಟಿಗಳಿಗೆ ನುಗ್ಗಿ, ತಲವಾರು ತೋರಿಸಿ ದನ ಕರುಗಳನ್ನು ಕದ್ದೊಯ್ಯುತ್ತಾರೆ,ಸಾಗಿಸುವಾಗ ಕೂಡ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಾರೆ.
ಇದನ್ನು ನಮ್ಮ ಕಾರ್ಯಕರ್ತರು ನೋಡಿ ಇನ್ನೂ ಸುಮ್ಮನಿರಲ್ಲ ಎಂದು ಶರಣ್ ಗುಡುಗಿದರು.ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ,ಕಾಪುವಿನ ತಹಶಿಲ್ದಾರರ ಕಚೇರಿಯೆದುರು ಧರಣಿ ನಡೆಸಿದರು .ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ ರತ್ನಕರ್ ಹೆಗ್ಡೆ,ಕೆ .ಉದಯ ಕುಮಾರ್,ಸುರೇಶ ಶೆಟ್ಟಿ ಗುರ್ಮೆ,ಸಂತೋಷ ಬೊಳ್ಜೆ,ಭಜರಂಗದಳದ ರಾಜ್ಯ ಸಂಚಾಲಕರಾದ ಸುನೀಲ್.ಕೆ.ಆರ್ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಭಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಶ್ವ ಹಿಂದೂ ಪರಿಷದ್ ಮುಖಂಡರಾದ ದಿನೇಶ್ ಶೆಟ್ಟಿ ಹೆಬ್ರಿ, ಪ್ರಮೋದ್ ಶೆಟ್ಟಿ ಮಂದಾರ್ತಿ ಮೊದಲಾದವರು ಉಪಸ್ಥಿತರಿದ್ದರು.