ಟಿಪ್ಪು ಜಯಂತಿ ರದ್ದು : ಸ್ವಾಗತಿಸಿದ ಹಿಂದೂ ಜನಜಾಗೃತಿ ಸಮಿತಿ
ಕ್ರೂರಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರದ ನಿರ್ಣಯ ಅತ್ಯಂತ ಸ್ವಾಗತಾರ್ಹವಾಗಿದೆ.
-ಹಿಂದೂ ಜನಜಾಗೃತಿ ಸಮಿತಿ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೇವಲ ಮುಸ್ಲಿಂರನ್ನು ಒಲೈಕೆ ಮಾಡುವ ಉದ್ದೇಶದಿಂದ ಕನ್ನಡ ವಿರೋಧಿ, ಅತ್ಯಂತ ಕ್ರೂರಿ, ಸಾವಿರಾರು ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ, ಲಕ್ಷಾಂತರ ಹಿಂದೂಗಳ ಹತ್ಯೆ ಮಾಡಿದ ಟಿಪ್ಪು ಜಯಂತಿಯನ್ನು ಸರ್ಕಾರದ ಸ್ಥರದಲ್ಲಿ ಆಚರಣೆ ಮಾಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಇಂದು ಈ ನಿರ್ಣಯವನ್ನು ಶ್ರೀ. ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರವು ಟಿಪ್ಪು ಜಯಂತಿ ಆಚರಣೆಯನ್ನು ರದ್ಧು ಮಾಡಿದೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಣಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ. ಹಿಂದೂ ಜನಜಾಗೃತಿ ಸಮಿತಿಯು ಸಹ ಕ್ರೂರಿ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ರಾಜ್ಯವ್ಯಾಪಿ ಆಂದೋಲನವನ್ನು ಇತರ ಹಿಂದೂ ಸಂಘಟನೆಗಳ ಜೊತೆಗೆ ಸೇರಿ ಮಾಡಿತ್ತು. ಇಂದು ಭಾಜಪ ಸರ್ಕಾರ ಟಿಪ್ಪು ಜಯಂತಿಯ ರದ್ದು ನಿರ್ಣಯವನ್ನು ಹಿಂದೂ ಜನಜಾಗೃತಿ ಸಮಿತಿಯು ಬೆಂಬಲಿಸುತ್ತದೆ.