ಸಿದ್ದಾರ್ಥ್ ಹೆಗ್ಡೆ ತಂದೆ ಸ್ಥಿತಿ ಚಿಂತಾಜನಕ

ಚಿಕ್ಕಮಗಳೂರು  – ಕಾಫಿ ಡೇ ಮಾಲೀಕ ಮೃತ ಪಟ್ಟ ಮಾಹಿತಿ ಅನಾರೋಗ್ಯದಿಂದ ಬಳಲುತ್ತಿರುವ ಅವರ ತಂದೆಗೆ ನೀಡದೆ ಗೌಪ್ಯತೆ ಕಾಪಾಡಲಾಗಿದೆ  . ಸಿದ್ದಾರ್ಥ್ ಸೋಮವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿ 36 ಗಂಟೆಗಳ ಬಳಿಕ ನೇತ್ರಾವತಿ ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದ್ದರೂ, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಅವರ ತಂದೆಗೆ ಇದರ ಬಗ್ಗೆ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಲಾಗಿದೆ ಕಾರಣ ಅನೇಕ ದಿನಗಳಿಂದ ಸಿದ್ದಾರ್ಥ್ ರ  ತಂದೆ ಗಂಗಯ್ಯ ಹೆಗ್ಡೆ  ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ , ಗಂಗಯ್ಯ ಹೆಗ್ಡೆ ಆಸ್ಪತ್ರೆ ದಾಖಲಾತಿಯನ್ನಆಸ್ಪತ್ರೆ ಸಿಬ್ಬಂದಿಗಳು ಗೌಪ್ಯವಾಗಿಟ್ಟಿದ್ದಾರೆ, ಗೋಪಾಲಗೌಡ ಆಸ್ಪತ್ರೆ ಮಾಲೀಕ ಸಂತೃಪ್ ರವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಂಬಂಧಿಯಾದ ಹಿನ್ನೆಲೆಯಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಸಿದ್ಧಾರ್ಥ್ ತಂದೆ ಕುರಿತ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಲಾಗಿದೆ  , ಮಗನ ಈ ದುರಂತ ಸಾವಿನ ಬಗ್ಗೆ ಇನ್ನು ವಿಷಯ ಅವರಿಗೆ ತಿಳಿದಿಲ್ಲ ಎಂಬ ಮಾಹಿತಿ ಇದೆ , ಆಸ್ಪತ್ರೆಯಲ್ಲಿ ಮಾಹಿತಿ ಕೇಳಿದವರಿಗೆ ಭಾನುವಾರವೇ ಡಿಸ್ ಚಾರ್ಜ್ ಆಗಿರುವ ಕುರಿತು ಮಾಹಿತಿ ನೀಡುತ್ತಿದ್ದಾರೆ.. ಸಿದ್ಧಾರ್ಥ್ ಹೆಗ್ಡೆ ಸಾವಿನಿಂದ ಚಿಕ್ಕಮಗಳೂರು ಜಿಲ್ಲೆ ನೀರವ ಮೌನಕ್ಕೆ ಶರಣಾಗಿದೆ ಸಾಮ್ರಾಜ್ಯ ಕಟ್ಟೋದೂ ತೋರಿಸಿ ಕೊಟ್ಟವರು ಸೋತು ಗೆಲ್ಲುವುದು ಹೇಗೆ ಎಂದು ತೋರಿಸಬೇಕಿತ್ತು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!