ಟೈಮ್ಸ್ ಪಾಕ ಶಾಲೆ; ಪಪ್ಪಾಯಿ ಮಿಲ್ಕ್ ಶೇಕ್
(ಉಡುಪಿ ಟೈಮ್ಸ್)- ಬೇಸಿಗೆಯ ಉರಿಬಿಸಿಲಿನಲ್ಲಿ ತಂಪಾದ ಜ್ಯೂಸು ಗಳು ದೇಹಕ್ಕೆ ಹಾಗು ಮನಸ್ಸಿಗೆ ಆಹ್ಲಾದವನ್ನ ನೀಡುತ್ತದೆ, ಅದರಲ್ಲೂ ಪಪ್ಪಾಯಿ ,ಸಪೋಟ ,ದಾಳಿಂಬೆ ಮುಂತಾದ ಹಣ್ಣಿನ ಮಿಲ್ಕ್ ಶೇಕ್ ಗಳು ಚೈತನ್ಯದಾಯಕವಾಗಿರುತ್ತದೆ
ಪಪ್ಪಾಯ ಮಿಲ್ಕ್ ಶೇಕ್ ಆರೋಗ್ಯಕಾರಿಯಾಗಿದ್ದು ಇದನ್ನು ಮಾಡುವ ವಿಧಾನವು ಸುಲಭವಾಗಿರುತ್ತದೆ ಇದಕ್ಕೆ ಬೇಕಾದ ಸಾಮಗ್ರಿಗಳು:
ಪಪ್ಪಾಯಿ ಹಣ್ಣಿನ ಹೋಳುಗಳು – 1 ಕಪ್
ಹಾಲು – ೧ ಲೋಟ
ಏಲಕ್ಕಿ ಪುಡಿ ಸ್ವಲ್ಪ
ಖರ್ಜೂರ – 6
ಬಾದಾಮಿ – 4
ಗೋಡಂಬಿ – 4
ಕಾಮಕಸ್ತೂರಿ ಬೀಜ – 2ಟೀ ಚಮಚ
ನೀರು – 2 ಲೋಟ
ಬೆಲ್ಲ ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಪಪ್ಪಾಯಿ ಹಣ್ಣಿನ ಹೋಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಹಾಲು ಸೇರಿಸಿ ರುಬ್ಬಿಕೊಳ್ಳಿ. ಕರ್ಜೂರವನ್ನ ನೀರಿನಲ್ಲಿ ನೆನಸಿ ರುಬ್ಬಿಕೊಳ್ಳಿ ಹಾಗು ಈ ಮಿಶ್ರಣವನ್ನ ಪಪ್ಪಾಯಿ ಮಿಶ್ರಣಕ್ಕೆ ಸೇರಿಸಿ , ನೀರು, ಏಲಕ್ಕಿ ಪುಡಿ, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಾದಾಮಿ ಹಾಗೂ ಗೋಡಂಬಿ ಚೂರುಗಳನ್ನು ಹಾಕಿ , ಕೊನೆಯಲ್ಲಿ ನೀರಿನಲ್ಲಿ ನೆನೆಸಿಟ್ಟ ಕಾಮಕಸ್ತೂರಿ ಬೀಜಗಳನ್ನು ಹಾಕಿ. ಈಗ ರುಚಿಕರವಾದ ಹಾಗೂ ಆರೋಗ್ಯಕರ ಪಪ್ಪಾಯಿ ಮಿಲ್ಕ್ ಶೇಕ್ ರೆಡಿ.
ನಿಮ್ಮಲ್ಲಿಯೂ ಹೊಸ ರುಚಿಯ ರೆಸಿಪಿಗಳಿಗಿದ್ದಲ್ಲಿ ರೆಸಿಪಿಯ ವಿವರ ಹಾಗು ಹೊಸ ರುಚಿಯ ಫೋಟೋ ಮತ್ತು ನಿಮ್ಮ ಫೋಟೋದೊಂದಿಗೆ ಉಡುಪಿ ಟೈಮ್ಸ್ ವೆಬ್ ಸೈಟ್ ಗೆ ಬರೆದು ಕಳುಹಿಸಬಹುದು ನಿಮ್ಮ ರೆಸಿಪಿ ಗಳನ್ನೂ 8762557633 ವಾಟ್ಸ್ ಅಪ್ ನಂಬರಿಗೆ ಕಳುಹಿಸಿ… [email protected] ಮೇಲ್ ಮಾಡಿ