ಹೊರ ರಾಜ್ಯದ ಕಳ್ಳರು ಬಂದಿದ್ದಾರೆ ಸುಳ್ಳು ಸುದ್ಧಿಗೆ ಕಿವಿಕೊಡದಿರಿ:ಉಡುಪಿ ಪೊಲೀಸ್

                                                                                                                                                  ಪೊಲೀಸ್ ಪ್ರಕಟಣೆ

ಉಡುಪಿ : ಇತ್ತೀಚಿನ ದಿನಗಳಲ್ಲಿ ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಕಂಬಳಿ ಇತರೆ ಹೊದಿಕೆ ಬೆಡ್ ಶೀಟ್, ಗೃಹಪಯೋಗಿ ಸಂಬಂಧಿತ ವಸ್ತುಗಳನ್ನು ಮಾರುವವರ ಮಾರುವೇಶದಲ್ಲಿ ಬಂದು ಮನೆಕಳ್ಳತನ ದರೋಡೆ ಸುಲಿಗೆ ಗಳನ್ನು ಮಾಡುತ್ತಿದ್ದು  ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಈ ಕೆಳಕಂಡಂತೆ ಸ್ಪಷ್ಟನೆಯನ್ನು ನೀಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಈ ರೀತಿಯ ಯಾವುದೇ ಘಟನೆಗಳು ವರದಿಯಾಗಿರುವುದಿಲ್ಲ.  ಈ ಬಗ್ಗೆ ಸಾರ್ವಜನಿಕರು ಅನಾವಶ್ಯಕವಾಗಿ ಭಯಭೀತರಾಗುವುದು ಬೇಡ. ಆದರೂ ಸಹ ಸಾರ್ವಜನಿಕರು ಅವರ ಮನೆಯ ಬಳಿ ಯಾವುದೇ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಜಾಗೃತೆಯಿಂದ ಇರುವುದು.

  • ಅವರನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಕರೆಯಬಾರದು

  • ಅವರೊಂದಿಗೆ ನಿಮ್ಮ ನೆರೆಕರೆಯವರ ಮಾಹಿತಿಯನ್ನು ಹಂಚಿಕೊಳ್ಳಬಾರದು

  • ಮನೆಯಲ್ಲಿ ಒಂಟಿ ಮಹಿಳೆಯರು ಇರುವಂತ ಸಂದರ್ಭದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯ ಆವರಣದ ಒಳಗೆ ಸೇರಿಸಬಾರದು

  • ಮನೆಯ ಬಳಿ ಯಾರಾದರೂ ಅಪರಿಚಿತರು ಅಥವಾ ಮಾರಾಟಗಾರರು ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಮ್‌ ನಂಬ್ರ 100 ಅಥವಾ 0820-2526444 ಗೆ ಕ್ಕೆ ಮಾಡುವುದು.

Leave a Reply

Your email address will not be published. Required fields are marked *

error: Content is protected !!