ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ – ಡಾ. ಹರೀಶ ಹಂದೆ
ಉಡುಪಿ: ಸೆಲ್ಕೋ ಸಂಸ್ಥೆ ಕೊಡಮಾಡುವ “ರಾಷ್ಟ್ರೀಯ ಸೂರ್ಯಮಿತ್ರ” ಪ್ರಶಸ್ತಿಯನ್ನು ಅಮಾಸೆಬೈಲು ಎ.ಜಿ.ಕೊಡ್ಗಿ ಮತ್ತು ಅಹಮ್ಮದಬಾದಿನ ಮಹಿಳಾ ಹೌಸಿಂಗ್ ಸೇವಾ ಟ್ರಸ್ಟಿನ ಬಿಜಲ್ ಬ್ರಹ್ಮಭಟ್ಗೆ ಮೈಸೂರಿನ ಗ್ರ್ಯಾಂಡ್ ಹೊಟೇಲ್ ಶನಿವಾರ ನಡೆದ ವಾರ್ಷಿಕ ಸಮಾರಂಭದಲ್ಲಿ ಪ್ರಧಾನ ಮಡಲಾಯಿತು.
ಕೃಷಿಯಲ್ಲಿ ವೈವಿಧ್ಯತೆ,ರಾಜಕೀಯ ಮುತ್ಸದ್ಧಿ ಎ.ಜಿ.ಕೊಡ್ಗಿಯವರು ಅಮಸೆಬೈಲು ಚಾರಿಟೇಬಲ್ ಟ್ರಸ್ಟ ಹುಟ್ಟು ಹಾಕಿ ದೇಶದಲ್ಲೆ ಮೊದಲ ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿಸಿದ ಕೀರ್ತಿ ಇವರದ್ದು, ಇಂಧನ ಸ್ವಾಲಂಬನೆಯನ್ನು ಮಾದರಿಯಾಗಿ ಅಮಾಸೆಬೈಲಿನ ವ್ಯಾಪ್ತಿಯ ಮೂರು ಗ್ರಾಮಗಳನ್ನು ರೂಪಿಸಿದವರು.
ಅದೇ ರೀತಿ ಅಹಮ್ಮದಬಾದಿನ ಬಿಜಲ್ ಅವರು ನಗರ ಪ್ರದೇಶದಲ್ಲಿ ಅತೀ ಕಡಿಮೆ ದರದಲ್ಲಿ ಬಡವರಿಗೆ ಮನೆ ನಿರ್ಮಾಣ ,ಬೆಳಕಿನ ವ್ಯವ್ಯಸ್ಥೆ ,ಸೋಲಾರ್ ಫ್ಯಾನ್ ,ಮಹಿಳಾ ಸಬಲೀಕರಣ,ಉದ್ಯಮಶೀಲತೆಯ ತರಬೇತಿ,ನೀರು ಸ್ವಚ್ಚತೆ ಇಂತಹ ಅತೀ ಮುಖ್ಯ ಮೂಲಭೂತ ಅವಶ್ಯಕತೆಗಳನ್ನು ಜನರಿಗೆ ತಲುಪಿಸಿದಾಕೆ.
ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಪ್ರಶಸ್ತಿ ಪ್ರದಾನ ಮಾಡಿ ಸೆಲ್ಕೋ ಸಂಸ್ಥೆಯ ಸ್ಥಾಪಕಾರದ ಹರೀಶ ಹಂದೆ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಸಂಪಾದಕರಾದ ವಿಶ್ವೇಶ್ವರ ಭಟ್,ಸೆಲ್ಕೋ ನಿರ್ದೇಶಕ ಥೋಮಸ್ ಪುಲೇನ್ಕವ್,ಟ್ರಸ್ಟಿ ಶ್ರೀನಿವಾಸ್, ಸಿ.ಇ.ಒ. ಮೋಹನ್ ಭಾಸ್ಕರ್ ಹೆಗಡೆ,ಮಹಾಪ್ರಬಂಧಕ ಜಗದೀಶ ಪೈ ಉಪಸ್ಥಿತರಿದ್ದರು.