ಉಡುಪಿ: 240 ಕೆಜಿ ಬೆಲ್ಲದ ಪರಿಸರ ಸ್ನೇಹಿ ಗಣಪ
ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್(ರಿ) ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ಮಂಡ್ಯದ ಬೆಲ್ಲದಿಂದ ರಚಿಸಲಾಗುವ ಪರಿಸರ ಸ್ನೇಹಿ "ಬೆಲ್ಲದ ಗಣಪತಿ"ಯನ್ನು ಕಲಾವಿದರಾದ ರವಿ ಹಿರೆಬೆಟ್ಟು ಲೋಕೇಶ್ ಚಿಟ್ಪಾಡಿ ಮತ್ತು ವಾಸುದೇವ ಚಿಟ್ಪಾಡಿ ತಯಾರಿಸುತ್ತಿದ್ದಾರೆ. ಸುಮಾರು 5 ಗಂಟೆಗಳ ಸಮಯದಲ್ಲಿ 240 ಕೆ.ಜಿ. ತೂಕದ ಬೆಲ್ಲದಲ್ಲಿ ಗಣೇಶನ ಕಲಾಕೃತಿ ರಚಿಸುತ್ತಿದ್ದಾರೆ.
ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುಥಿ ವಿಥಿಕಾ ಬಳಿ ಪ್ರದರ್ಶನ ಮಂಟಪದಲ್ಲಿ ಇರಿಸಲಾಗುವುದೆಂದು ಸಂಘಟಕ ನಿತ್ಯಾನಂದ ಒಳಕಾಡು ತಿಳಿಸಿದರು.
ಈ ಬೆಲ್ಲದ ಗಣಪತಿಯಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ, ಗಣೇಶ ಚರ್ತುಥಿ ಬಳಿಕ ಈ ಬೆಲ್ಲದಿಂದ ಪಾನಕ ಮಾಡಿ ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದರು.
ನಾಡಿನೆಲ್ಲೆಡೆ ಗಣಪತಿ ಮೂರ್ತಿಯನ್ನು ರಚಿಸಿ ಅದನ್ನು ವಿರ್ಸಜಿಸುವಾಗ ಪರಿಸರಕ್ಕೆ ಹಾನಿಯುಂಟಾಗುತ್ತದೆ, ಆದರೆ ನಾವು ತಯಾರಿಸಿದ ಗಣಪನಿಂದ ಯಾವುದೇ ಹಾನಿವಿಲ್ಲವೆಂದು ಒಳಕಾಡು ತಿಳಿಸಿದರು.
ಮಂಡ್ಯದಿಂದ ಬೆಲ್ಲದ ಗಟ್ಟಿಯನ್ನು ಗಣಪತಿ ತಯಾರಿಕೆಗೆಂದು, ವಿಶೇಷವಾಗಿ ತಯಾರಿಸಿ ಕಟಪಾಡಿಯ ವಿಜೇಂದ್ರ ಭಟ್ ಅವರು ಸಂಘಟಕರಿಗೆ ಒದಗಿಸಿದ್ದಾರೆ.
ನಾಳೆ ಬೆಳಿಗ್ಗೆ 9 ಗಂಟೆಗೆ ಸರ್ವಧರ್ಮದ ಗಣ್ಯರ ಮೂಲಕ ಉಧ್ಘಾಟನೆಗೊಳ್ಳಲಿದೆ. ಆ ಬಳಿಕ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗುವುದೆಂದು ಸಮಿತಿಯ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.