ಆಳ್ವಾಸ್ ಪಿಯು ಕಾಲೇಜಿನಲ್ಲಿ ಸ್ಕೌಟ್ಸ್, ಗೈಡ್ಸ್ ಉದ್ಘಾಟನೆ


ಮೂಡುಬಿದಿರೆ: ಸ್ಕೌಟ್ಸ್ ಹಾಗೂ ಗೈಡ್ಸ್ ಸೇವಾ ಮನೋಭಾವ ಮತ್ತು ಉತ್ತಮ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ.
ರಾಷ್ಟ್ರದಾದ್ಯಂತ 216ಕ್ಕೂ ಅಧಿಕ ದೇಶಗಳಲ್ಲಿ ಸೇವಾ ಚಟುವಟಿಕೆಯಿಂದ ಗುರುತಿಸಿಕೊಂಡಿರುವ ಸ್ಕೌಟ್ಸ್ ಜೀವನದ ಶಿಕ್ಷಣ, ಜೀವನದ ಕೌಶಲವನ್ನು ಈ ಸಂಸ್ಥೆಯಿಂದ ಸಿಗುತ್ತಿದೆ ಎಂದು ಸ್ಕೌಟ್ಸ್ ಹಾಗೂ ಗೈಡ್ಸ್ ಮೂಡುಬಿದಿರೆ ವಲಯ ಕಾರ್ಯದರ್ಶಿ ವಸಂತ ದೇವಾಡಿಗ ಹೇಳಿದರು.

ಅವರು ಆಳ್ವಾಸ್ ಪಿಯು ಕಾಲೇಜಿನಲ್ಲಿ ಸ್ಕೌಟ್ಸ್ ಹಾಗೂ ಗೈಡ್ಸ್ ಘಟಕವನ್ನು ಶನಿವಾರ ವಿದ್ಯಾಗಿರಿಯ ಶಿವರಾಮ ಕಾರಂತ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನಲ್ಲಿ ಶಿಸ್ತಿನ ಪಾಠ ಕಲಿಯಬೇಕಾದರೆ ಸ್ಕೌಟ್ಸ್ ಗೈಡ್ಸ್ ಪ್ರಮುಖ ಪಾತ್ರವಹಿಸುತ್ತದೆಂದು ಈ ಸಂದರ್ಭ ಹೇಳಿದರು.


ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಎಚ್. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಸ್ಕೌಟ್ಸ್, ಗೈಡ್ಸ್ ಮುಖಾಂತರ ವಿದ್ಯಾರ್ಥಿಗಳ ಸೇವೆ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು

.
ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಸ್ಕೌಟ್ಸ್, ಗೈಡ್ಸ್ ದಳದ ನಾಯಕಾರದ ಕಾರ್ತಿಕ್, ಸುಷ್ಮಾ ಕ್ರಾಸ್ತಾ ಉಪಸ್ಥಿತರಿದ್ದರು.
ಲಾಸ್ಯ ಸ್ವಾಗತಿಸಿದರು. ಲಿಖಿತಾ ಅತಿಥಿ ಪರಿಚಯ ಮಾಡಿದರು. ನಂದಿತಾ ವಂದಿಸಿದರು. ಸೌಜನ್ಯ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!