ತುಪ್ಪ ತಿಂದವರಿಂದ ದೇಶ ಹಾಳಾಗಿದೆ,ಮಾಂಸ ತಿಂದವರಿಂದಲ್ಲ:ಸ್ವಾಮೀಜಿ
ಉಡುಪಿ: ” ದೇಶವು ತುಪ್ಪ ತಿಂದವರಿಂದ ಹಾಳಾಗಿದೆಯೇ ಹೊರತು ಮಾಂಸ ತಿಂದವರಿಂದ ಹಾಳಾಗಿಲ್ಲ, ಈಗ ಧರ್ಮವೆಂದರೆ ಮೋಸ ಮಾಡಿ ದುಡ್ಡು ಮಾಡುವುದಾಗಿದೆ” ಎಂಬುದಾಗಿ ನಿಜಗುಣ ಪ್ರಭು ತೋಂಟಾದಂಚಾರ್ಯ ಸ್ವಾಮೀಜಿ ಇಂದು ಸರ್ವ ಜನರ ಸಂವಿಧಾನ ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ಉಡುಪಿಯ ಬಾಸೆಲ್ ಮಿಷನರೀಸ್ ಸಭಾಂಗಣದಲ್ಲಿ “ಸರ್ವ ಜನರ ಸಂವಿಂಧಾನ “ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು” ಧರ್ಮ ಅಂದ್ರೆ ಜನಿವಾರಧಾರಿ, ನಮಾಜ್, ಪ್ರಾರ್ಥನೆ ,ಗಣಪತಿ ಮೂರ್ತಿ ಇಟ್ಟು ಕಂಠಪೂರ್ತಿ ಕುಡಿದು, ಡಿಜೆ ಹಾಕಿ ಡಾನ್ಸ್ ಮಾಡುವುದಲ್ಲ” ಎಂದು ನಿಜಗುಣ ಹೇಳಿದರು.
ಜನರಿಗೆ ದೇವರ ಮೇಲಿನ ಭಯ ಹೋಗಬೇಕು ,ನಮ್ಮನ್ನು ಯಾರು ಸೃಷ್ಟಿಸಿದರು ಅವರ ಮೇಲೆ ಗೌರವ ಇರಬೇಕು, ಮನುಷ್ಯರ ಮೈಮೇಲೆ ದೇವರು ಬರುವುದು ಸುಳ್ಳು, ಹಾಗೆಲ್ಲ ಇರುವುದಾದರೆ ನಮ್ಮ ದೇಶದ ಮೇಲೆ ಪಾಕಿಸ್ತಾನದ ಉಗ್ರರರು ಯಾವೆಲ್ಲ ಭಾಗದಲ್ಲಿ ನುಸುಳಿದ್ದಾರೆ ಎಂದು ಹೇಳಲಿ ಎಂದು ಸ್ವಾಮೀಜಿ ಹೇಳಿದರು. ದೇವರ ಭಯದಿಂದ ಮೊದಲು ಹೊರ ಬನ್ನಿ,ಅಂಧ ಭಕ್ತರು ಬೆಂಕಿ ಮೇಲೆ ಓಡುತ್ತಾರೆ ಆದರೆ ಅವರಿಗೆ ಅಷ್ಟು ದೇವರ ಮೇಲೆ ಭಕ್ತಿ ಇದ್ದರೆ ಬೆಂಕಿ ಮೇಲೆ ಉರುಳಾಡಲಿ ಎಂದರು. ಜನರಲ್ಲಿ ಅಜ್ಞಾನದ ಮೂಟೆ ತುಂಬಿದೆ, ನೀವು ಯಾರನ್ನು ಕೂಡ ನೋಯಿಸದೇ ಇರುವುದು, ಮನೆ ಹಾಳು ಮಾಡದಿರುವುದು ನಿಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕಾದ ಒಳ್ಳೆ ಗುಣ ಎಂದು ಕಿವಿಮಾತು ಹೇಳಿದರು.
ಸಂವಿಧಾನ ಬದಲಿಸಲು ಯಾರಿಂದಲೂ ಆಗಲ್ಲ ಯಾವ ರಾಜಕೀಯಾ ಪಕ್ಷದಿಂದಲೂ ಇದೂ ಆಸಾಧ್ಯವಾದ ಕಾರ್ಯವಾಗಿದೆ. ಸೂರ್ಯ ಚಂದ್ರರಿರುವವರೆಗೆ ನಮ್ಮ ದೇಶದಲ್ಲಿ ಸಂವಿಧಾನ ಇರುತ್ತದೆಂದರು. ಈಗ ಕೆಲವರಿಗೆ ವಿದೇಶ ಸುತ್ತುವ ಚಾಳಿ ಇದೆ ,ಅಲ್ಲಿ ಹೋದಾಗ ಸಿಗುವ ಮರ್‍ಯಾದೆ ಇವರ ಸ್ವಂತ ವರ್ಚಸ್ಸಿನಿಂದಲ್ಲ ,ಇದು ಈ ದೇಶದ ಮಹಾನ್ ನೇತಾರರಾದ ಮಹಾತ್ಮಾ ಗಾಂಧೀಜಿ ಮತ್ತು ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಹಾಕಿಕೊಟ್ಟ ತಳಹದಿಂದ ಸಿಗುತ್ತಿದೆಂದು ಅವರಿಗೆ ತಿಳಿದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಎಸ್‌ಎಸಿ-ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹಾದೇವ ಸ್ವಾಮಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ ಮುಖಂಡ ಕೆ.ಎಲ್. ಅಶೋಕ್, ಅಖಿಲ ಭಾರತ ಕ್ರೈಸ್ತ ಒಕ್ಕೂಟ ಉಡುಪಿ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಭಾಗವಹಿಸಿದರು. ಪ್ರಮುಖರಾದ ಮಲ್ಲೇಶ ಅಂಬುಗ, ಚಂದು ಎಲ್., ಹಾಲೇಶಪ್ಪ, ರಾಘವ ಕುಕ್ಕುಜೆ, ಲೋಕೇಶ್ ಪಡುಬಿದ್ರಿ, ರಾಘವೇಂದ್ರ, ಶಂಕರದಾಸ್, ರಾಜೇಂದ್ರನಾಥ್, ವಿಮಲ ಅಂಚನ್ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಜಿ. ರಾಜಶೇಖರ್, ರಮೇಶ್, ರೋಹಿತಾಕ್ಷ ಕೆ., ವಿಲಿಯಂ ಮಾರ್ಟಿಸ್, ಹಾಜಿ ಅಬ್ದುಲ್ಲಾ ಪರ್ಕಳ ಅವರನ್ನು ಸನ್ಮಾನಿಸಲಾಯಿತು. ಸಮಾವೇಶಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಮೆರವಣಿಗೆ