ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಯುವಜೋಡಿಯ ಬಂಧನ
ಕಾರ್ಕಳ: ದಾವಣಗೆರೆಯಿಂದ ಕಾರಿನಲ್ಲಿ ಕಾರ್ಕಳಕ್ಕೆ ಬಂದಿದ್ದ ಯುವಜೋಡಿಯೊಂದು ಶಾಪಿಂಗ್ ನೆಪದಲ್ಲಿ ತಮ್ಮಲ್ಲಿದ್ದ ಖೋಟಾ ನೋಟುಗಳನ್ನು ಚಲಾವಣೆ ಮಾಡಿ ಬಂಧಿತರಾಗಿದ್ದಾರೆ.
ದಾವಣಗೆರೆ ಮೂಲದ ಅರ್ಪಿತಾ ಹಾಗೂ ಚೇತನ ಎಂಬಿಬ್ಬರು ಬುಧವಾರ ಮಧ್ಯಾಹ್ನ ಕಾರ್ಕಳಕ್ಕೆ ಬಂದಿದ್ದರು. ೨೦೦ ಮುಖಬೆಲೆಯ ಖೋಟಾ ನೋಟುಗಳನ್ನು ಬಳಸಿ ಕಾರ್ಕಳ, ಬೆಳ್ಮಣ್ಣು ಮುಂತಾದ ಕಡೆಗಳಲ್ಲಿ ಭರ್ಜರಿ ಶಾಪಿಂಗ್ ನಡೆಸುತ್ತಿದ್ದಾಗ ಸಂಶಯಗೊಂಡ ಅಂಗಡಿ ಮಾಲೀಕರು ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಕಾರ್ಯಪ್ರವೃತ್ತರಾಗಿ ಅರ್ಪಿತಾ ಹಾಗೂ ಚೇತನ ಅವರನ್ನು ಠಾಣೆಗೆ ಕರೆದೊಯ್ದು ಅವರಲಿದ್ದ ಖೋಟಾ ನೋಟುಗಳನ್ನು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ನಿರಾಕರಿಸಿದ್ದು, ತನಿಣೆಯ ಬಳಿಕವಷ್ಟೇ ಈ ದಂಧೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಲಿದೆ.