ತಮ್ಮಯ್ಯರ ಹೆಸರಿನಲ್ಲಿ ದತ್ತಿ ಉಪನ್ಯಾಸ : ಪ್ರೋ. ತುಕರಾಮ ಪೂಜಾರಿ

ಬಂಟ್ವಾಳ:  ತುಳು ಲಿಪಿ ಶಿಕ್ಷಕರಾಗಿಯೂ ಕೆಲಸ ಮಾಡಿದ ನಿವೃತ್ತ ಕಂದಾಯ ಇಲಾಖಾಧಿಕಾರಿ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಬಿ.ತಮ್ಮಯ್ಯ ಹೆಸರಲ್ಲಿ ವಾರ್ಷಿಕ ದತ್ತಿ ಉಪನ್ಯಾಸವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಸಲಾಗುವುದು ಎಂದು ಅದರ ಅಧ್ಯಕ್ಷ ಪ್ರೊ .ತುಕಾರಾಮ ಪೂಜಾರಿ ಹೇಳಿದ್ದಾರೆ.

ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ದಿ| ಬಿ. ತಮ್ಮಯ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ತುಳು ಕಲಿಸುವ ಅವರ ಆಶಯವನ್ನು ಕೇಂದ್ರದ   ಮೂಲಕ ಮುನ್ನಡೆಸುವುದಾಗಿ ಅವರು  ಪ್ರಕಟಿಸಿದರು.

ತುಳು ಲಿಪಿ ಭಾಷೆಯನ್ನು ವಿವಿಧ ಶಾಲಾ ಕಾಲೇಜಿನಲ್ಲಿ ಕಲಿಸುವ ಮೂಲಕ ತುಳು ಸಂಸ್ಕೃತಿಯನ್ನು ಪ್ರಚುರ ಪಡಿಸುವ ಕೆಲಸವನ್ನು ದಿ| ಬಿ. ತಮ್ಮಯ ಮಾಡಿದ್ದಾರೆ ಎಂದು ಪುತ್ತೂರು ವಿವೇಕಾನಂದ ಕಾಲೇಜು ಪ್ರಿನ್ಸಿಪಾಲ್ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಬಂಟ್ವಾಳ ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಎಸ್‌ವಿಎಸ್ ಕಾಲೇಜು ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್, ಯುವವಾಹಿನಿ ಬಂಟ್ವಾಳ ಘಟಕ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಸಾಮಾಜಿಕ ಸೇವಾಕರ್ತ ದಾಮೋದರ ಸಂಚಯಗಿರಿ, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ನುಡಿ ನಮನ ಸಲ್ಲಿಸಿದರು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್, ಸದಾನಂದ ಶೆಟ್ಟಿ ರಂಗೋಲಿ, ಟೆಲಿಕಾಂ ನಿವೃತ್ತ ಎಸ್‌ಡಿಇ ವಿಠಲ ಭಂಡಾರಿ, ಬಿ. ಸಂಜೀವ ಪೂಜಾರಿ ಗುರುಕೃಪ, ಆಶಾಲತಾ ಸುವರ್ಣ, ಯುವವಾಹಿನಿ ಅಧ್ಯಕ್ಷ ಇಂದಿರೇಶ್, ಹರೀಶ್ ಪೂಜಾರಿ, ರಾಜೇಶ್ ಬಾಬನಕಟ್ಟೆ, ರಾಘವೇಂದ್ರ ಹೊಳ್ಳ, ಪಿಂಚಣಿದಾರರ ಸಂಘದ ಕಾರ್ಯದರ್ಶಿ ನೀಲೋಜಿರಾವ್ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!